ಪಾಕಿಸ್ತಾನದ ವಿವಾಹ ಕಾನೂನು ಅಚ್ಚರಿ ಹುಟ್ಟಿಸುವಂತಿದೆ. ಅಲ್ಲಿ 18 ವರ್ಷದ ಹುಡುಗ್ರು ಮದುವೆ ಆಗ್ಬಹುದು. ಅದೇ ರೀತಿ 16 ವರ್ಷ ಮೇಲ್ಪಟ್ಟ ಹುಡುಗಿಯರು ಮದುವೆ ಆಗ್ಬಹುದು. ಅಂತರಾಷ್ಟ್ರೀಯ ಮಾನದಂಡಗಳು ಪುರುಷರು ಮತ್ತು ಮಹಿಳೆಯರಿಗೆ ಮದುವೆಯಾಗಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಎನ್ನುತ್ತದೆ. ಆದ್ರೆ ಪಾಕಿಸ್ತಾನದಲ್ಲಿ ಮಾತ್ರ ಇದು ಭಿನ್ನವಾಗಿದೆ. ಇಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಮಕ್ಕಳಿಗೂ ಹೆಚ್ಚಿನ ಪ್ರಮಾಣದಲ್ಲಿ ಮದುವೆ ಮಾಡಲಾಗ್ತಿದೆ.
ಸಿಂಧ್ ಪ್ರಾಂತ್ಯವು 2013 ರಲ್ಲಿ ಮದುವೆ ಕಾನೂನಿನಲ್ಲಿ ಬದಲಾವಣೆ ತಂದಿದೆ. ಹುಡುಗ ಮತ್ತು ಹುಡುಗಿಯರ ಮದುವೆಯ ವಯಸ್ಸನ್ನು 18 ಕ್ಕೆ ಏರಿಸಿದೆ. ಆದ್ರೆ ದೇಶಾದ್ಯಂತ ಈ ಬದಲಾವಣೆ ಬಂದಿಲ್ಲ. ಹಾಗಾಗಿ ವಿಶ್ವದಲ್ಲೇ ಬಾಲ್ಯವಿವಾಹದ ಹೆಚ್ಚಿನ ಸಂಖ್ಯೆ ಪಾಕಿಸ್ತಾನದಲ್ಲಿದೆ.
ಪಾಕಿಸ್ತಾನದಲ್ಲಿ 18.9 ಮಿಲಿಯನ್ ಹುಡುಗರು 18 ವರ್ಷಕ್ಕಿಂತ ಮೊದಲು ಮತ್ತು 4.6 ಮಿಲಿಯನ್ ಹುಡುಗಿಯರು 16 ವರ್ಷಕ್ಕಿಂತ ಮೊದಲು ಮದುವೆಯಾಗುತ್ತಾರೆ ಎಂದು ಯುನಿಸೆಫ್ ಡೇಟಾ ಹೇಳಿದೆ. ಪೀಳಿಗೆಯಿಂದ ಪೀಳಿಗೆಗೆ ಇದು ಹಸ್ತಾಂತರವಾಗ್ತಿದೆ. ಖೈಬರ್ ಪಖ್ತುಂಖ್ವಾ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್‌ನಂತಹ ಪ್ರದೇಶಗಳಲ್ಲಿ ಈ ಸಂಖ್ಯೆ ಹೆಚ್ಚಿದೆ.