ಮದುವೆಯ ಕಾನೂನುಬದ್ಧ ವಯಸ್ಸನ್ನು ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಹೆಚ್ಚಿಸಲಾಗಿದೆ. ಈವರೆಗೆ 16 ರಿಂದ 17 ವರ್ಷ ವಯಸ್ಸಿನವರು ಪೋಷಕರ ಒಪ್ಪಿಗೆಯೊಂದಿಗೆ ವಿವಾಹವಾಗಬಹುದಾಗಿತ್ತಾದರೂ ಇದೀಗ 18 ವರ್ಷ ನಿಗದಿಪಡಿಸಲಾಗಿದೆ.
ಕೆಲವೊಬ್ಬರು ತಮ್ಮ ಮಕ್ಕಳ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ 18 ವಯಸ್ಸಿನೊಳಗೆ ಮದುವೆ ಮಾಡಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಯುವಜನರನ್ನು ರಕ್ಷಿಸುವ ಸಲುವಾಗಿ ಈ ಕಾನೂನನ್ನು ರೂಪಿಸಲಾಗಿದೆ.
ಇನ್ನು ಮುಂದೆ ನಿಗದಿಪಡಿಸಿರುವ 18 ವಯಸ್ಸಿನೊಳಗೆ ಮದುವೆ ಮಾಡಿಸಿದರೆ ಅಂತವರು ಏಳು ವರ್ಷಗಳ ಕಾಲ ಜೈಲು ಪಾಲಾಗಬೇಕಾಗುತ್ತದೆ. ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ರೂಪಿಸಲಾಗಿರುವ ನೂತನ ಕಾನೂನನ್ನು ಬಹುತೇಕರು ಸ್ವಾಗತಿಸಿದ್ದಾರೆ.