ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ನ ರಸ್ತೆಗಳ ಒಂದು ಭಾಗದಲ್ಲಿ ಹಸಿರು ಹಾಸಿದ ಎತ್ತರದ ಮರಗಳು ಬೆಟ್ಟದ ಮೇಲೆ ಉದ್ದಕೆ ಚಾಚಿದ್ದರೆ, ಇನ್ನೊಂದೆಡೆ ಆಳ ಕಣಿವೆಗಳು ಪ್ರಯಾಣವನ್ನು ಸಾಹಸ ಮಯವಾಗಿಸುತ್ತವೆ. ಇಲ್ಲಿ ಆಗಾಗ ಎದುರಾಗುವ ಪನೋರಮಾ ವ್ಯೂ ಪಾಯಿಂಟ್‌ಗಳು ರಿಫ್ರೆಶಿಂಗ್ ಫೀಲಿಂಗ್ ನೀಡುತ್ತವೆ. ದೂರದಲ್ಲಿ ಕಾಂಚನಜುಂಗ ಪರ್ವತವನ್ನೂ ಕಾಣಬಹುದು. ಗ್ಯಾಂಗ್ಟಕ್ ಮನಸ್ಸಿಗೆ ಶಾಂತಿ ನೀಡುವ ತಂಪಾದ ತಾಣ.
ಕೊಡೈಕೆನಾಲ್
ಮಧುರೈನಿಂದ 120 ಕಿಲೋಮೀಟರ್ ದೂರದಲ್ಲಿರುವ ಈ ಮಂಜು ಕವಿದ ಹಿಲ್ ಸ್ಟೇಶನ್, ತನ್ನ ಸೋದರಿ ಊಟಿಗಿಂತ ಹೆಚ್ಚು ರಿಲ್ಯಾಕ್ಸಿಂಗ್ ಅನುಭವ ನೀಡಬಲ್ಲದು. ಈ ತಿಂಗಳಲ್ಲಿ ತಡೆದುಕೊಳ್ಳಲಾರದಷ್ಟು ಚಳಿಯೂ ಅಲ್ಲದೆ ಹಿತವಾದ ತಂಪು ವಾತಾವರಣದೊಂದಿಗೆ ಕೈ ಬೀಸಿ ಕರೆವ ಕೊಡೈಕೆನಾಲ್ ಮಧ್ಯದಲ್ಲಿ ಕೊಡೈ ಎಂಬ ಸುಂದರವಾದ ನಕ್ಷತ್ರದಾಕಾರದ ಸರೋವರವಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹರಿವ ಸರೋವರದ ಸೊಬಗು ಮತ್ತಷ್ಟು ಮುದ ನೀಡುತ್ತದೆ.
ಲೋನಾವಾಲಾ
ಮುಂಬೈಯಿಂದ 106 ಕಿಲೋಮೀಟರ್ ದೂರದಲ್ಲಿರುವ ಈ ರೆಸಾರ್ಟ್‌ಗಳ ಪಟ್ಟಣ, ಪುಟ್ಟ ಪುಟ್ಟ ಸುಂದರವಾದ ಜಲಪಾತಗಳಿಂದ ತುಂಬಿದೆ. ಇಲ್ಲಿ ಚಿಕ್ಕಿ ಫೇಮಸ್. ಪುಟ್ಟ ಪುಟ್ಟ ಅಂಗಡಿಗಳೂ ಚಿಕ್ಕಿಯನ್ನು ಮಾರುತ್ತವೆ. ಇನ್ನು ವ್ಯಾಕ್ಸ್ ಮ್ಯೂಸಿಯಂ, ಗೋ ಕಾರ್ಟ್, ದೊಡ್ಡ ವಾಟರ್ ಪಾರ್ಕ್ ಕೂಡಾ ಸಂತಸ ಹೆಚ್ಚಿಸಲು ಇಲ್ಲಿ ಸದಾ ಸಿದ್ಧವಿರುತ್ತವೆ. ಮಹಾರಾಷ್ಟ್ರದಲ್ಲಿ ಅಜಂತಾ ಎಲ್ಲೋರಾ ಬಿಟ್ಟರೆ ಇಲ್ಲಿನ ಕಾರ್ಲಾ ಹಾಗೂ ಭಜಾ ಗುಹೆಗಳು ಭೇಟಿ ನೀಡಲೇಬೇಕಾದಂತವು.
ಮಹಾಬಲೇಶ್ವರ
ಮಹಾಬಲೇಶ್ವರದ ಬೆಟ್ಟಗುಡ್ಡಗಳ ಸೌಂದರ್ಯವನ್ನು ನೋಡಿಯೇ ಸವಿಯಬೇಕು. ಇಲ್ಲಿನ ವ್ಯೂ ಪಾಯಿಂಟ್ಸ್ ಹಾಗೂ ಜಲಪಾತಗಳು ಬಹಳಷ್ಟು ಪ್ರವಾಸಿಗರನ್ನು ಸೆಳೆಯುತ್ತವೆ. ಇಲ್ಲೇ ಹತ್ತಿರದಲ್ಲಿ ಪ್ರತಾಪಗಢ ಕೋಟೆ, ಖಾಸ್ ಪ್ಲ್ಯಾಟ್ಯೂ ಆಫ್ ಫ್ಲವರ್ಸ್ ಇದ್ದು, ಪ್ರವಾಸಕ್ಕೆ ಮತ್ತಷ್ಟು ಬಣ್ಣ ತುಂಬುತ್ತವೆ.
ಉದಯ್‌ಪುರ್
ಅರಾವಲಿ ಪರ್ವತರಾಶಿಯ ನಡುವೆ ನಿಂತಿರುವ ಉದಯಪುರ ಕೆರೆಗಳ ನಗರ ಎಂದೇ ಖ್ಯಾತಿ. ಇಲ್ಲಿ ಪ್ರಮುಖವಾಗಿ ಐದು ಕೆರೆಗಳಿದ್ದು, ಅವೆಂದರೆ, ಫತೇಹ್ ಸಾಗರ್ ಲೇಕ್, ಲೇಕ್ ಪಿಚೇಲಾ, ಸ್ವರೂಪ್ ಸಾಗರ್ ಲೇಕ್, ರಂಗಸಾಗರ್ ಹಾಗೂ ದೂಧ್ ತಲೈ ಲೇಕ್. ನಗರದಲ್ಲಿ 16ನೇ ಶತಮಾನಕ್ಕೆ ಸೇರಿದ ಹಲವಾರು ಅರಮನೆಗಳು, ಕೋಟೆಗಳು, ದೇವಾಲಯಗಳು ಹಾಗೂ ಉದ್ಯಾನಗಳನ್ನು ಕಾಣಬಹುದು.
ಪುದುಚೇರಿ
ಪಾಂಡಿಚೇರಿ ಎಂದೂ ಕರೆಸಿಕೊಳ್ಳುವ ಈ ಕೇಂದ್ರಾಡಳಿತ ಪ್ರದೇಶ ಬೆಂಗಳೂರಿಗರಿಗೆ ಅಂಥ ದೂರವೇನಲ್ಲ. ಸುಂದರ ಬೀಚ್‌ಗಳು, ಭವ್ಯ ಪರಂಪರೆ, ಸಾಹಸ ಹಾಗೂ ಸಾಂಸ್ಕೃತಿಕ ಅನುಭವಗಳ ಪ್ಯಾಕೇಜ್ ಪುದುಚೇರಿ. ಬೋರಾಗಲು ಕಾರಣಗಳೇ ಇಲ್ಲದ ಸ್ಥಳವಿದು.