ಬ್ಯಾಂಕಿನ ಭದ್ರತಾ ಸಿಬ್ಬಂದಿ ತನಗೆ ಮಾಸ್ಕ್ ಧರಿಸಲು ಹೇಳಿದ ಕಾರಣಕ್ಕೆ ಸಿಟ್ಟಿಗೆದ್ದ ಚೀನಾದ ಸಿರಿವಂತನೊಬ್ಬ ತನ್ನ ಉಳಿತಾಯ ಖಾತೆಯಿಂದ ಭಾರೀ ಮೊತ್ತ ಹಿಂಪಡೆದುಕೊಂಡು ಅದನ್ನು ಎಣಿಸಲು ಬ್ಯಾಂಕಿನ ಸಿಬ್ಬಂದಿಗೆ ಆಗ್ರಹಿಸಿದ್ದಾನೆ.
ಚೀನಾದ ಸಾಮಾಜಿಕ ಜಾಲತಾಣ ’ವೈಯ್ಬೋ’ದಲ್ಲಿ ’ಸನ್‌ವೇರ್’ ಎಂದು ಗುರುತಿಸಿಕೊಂಡಿರುವ ಈತ ಬ್ಯಾಂಕ್ ಆಫ್ ಶಾಂಘಾಯ್‌ನಿಂದ ಬ್ಯಾಂಕಿನ ನೋಟುಗಳ ರೂಪದಲ್ಲಿ 5 ದಶಲಕ್ಷ ಯುವಾನ್ (5.8 ಕೋಟಿ ರೂ.ಗಳು) ಹಿಂಪಡೆದುಕೊಂಡಿದ್ದಾನೆ.
ತನ್ನೆಲ್ಲಾ ಉಳಿತಾಯ ಖಾಲಿಯಾಗುವವರೆಗೂ ಪ್ರತಿನಿತ್ಯ ಬ್ಯಾಂಕಿಗೆ ತೆರಳಿ, ದುಡ್ಡು ಹಿಂಪಡೆದುಕೊಂಡು, ಅಲ್ಲಿನ ಸಿಬ್ಬಂದಿಗೆ ಲೆಕ್ಕಾಚಾರ ಮಾಡುವ ತಲೆ ನೋವು ಕೊಡುವುದಾಗಿ ಈತ ಹೇಳಿಕೊಂಡಿದ್ದಾನೆ.
ದೇಶದ ಜನತೆಗೆ ಇಂದು ‘ಮನ್ ಕಿ ಬಾತ್’ನಲ್ಲಿ ಮೋದಿ ಮಹತ್ವದ ಮಾಹಿತಿ
ಬ್ಯಾಂಕಿನ ಸಿಬ್ಬಂದಿ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಆಪಾದನೆ ಮಾಡುವ ಈತ, ಏನಾಯಿತು ಎಂದು ಸ್ಪಷ್ಟವಾಗಿ ವಿವರಿಸಿಲ್ಲ.
“ನಗದನ್ನು ಪೂರ್ತಿಯಾಗಿ ಲೆಕ್ಕ ಹಾಕಲು ಬ್ಯಾಂಕಿನ ಸಿಬ್ಬಂದಿಗೆ ವಿನಂತಿಸಿಕೊಳ್ಳುವುದು ಅಗತ್ಯವಾಯಿತು. ಇಬ್ಬರು ಸಿಬ್ಬಂದಿಗೆ ನಗದು ಹಿಂಪಡೆತವನ್ನು ಒಂದೇ ಒಂದು ಕೌಂಟರ್ ಮೂಲಕ ಮಾಡಲು ಎರಡು ಗಂಟೆ ಹಿಡಿದಿದೆ. ಅವರ ಈ ವರ್ತನೆಯಿಂದಾಗಿ ಉಳಿತಾಯ ಖಾತೆಯಲ್ಲಿರುವ ಎಲ್ಲಾ ದುಡ್ಡನ್ನು ಹಿಂಪಡೆದುಕೊಂಡು ಮಿಕ್ಕ ಬ್ಯಾಂಕುಗಳಲ್ಲಿ ಹಾಕುತ್ತೇನೆ,” ಎಂದಿದ್ದಾನೆ ಈತ.
ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ಸತತ 5 ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ
ಬ್ಯಾಂಕ್ ನೋಟುಗಳನ್ನು ಸೂಟ್‌ಕೇಸುಗಳಲ್ಲಿ ತುಂಬಿಕೊಂಡು ತನ್ನೊಂದಿಗೆ ತೆಗೆದುಕೊಂಡು ಸಾಗುತ್ತಿರುವ ಈತನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.