’ಈ ಪ್ರೀತಿ ಅನ್ನೋದೆಲ್ಲಾ ಬಡ ಜನರಿಗಾಗಿ ಇರೋದು’ ಎನ್ನುವ ಕೋಟ್ಯಾಧಿಪತಿಯೊಬ್ಬ ನಾಲ್ಕನೇ ಮದುವೆಯಾಗಲು ಸಜ್ಜಾಗಿದ್ದಾನೆ. ಬ್ರಾಂಡನ್ ವೇಡ್ ಹೆಸರಿನ 51 ವರ್ಷ ವಯಸ್ಸಿನ ಈ ವ್ಯಕ್ತಿ ತನ್ನ ನಾಲ್ಕನೇ ಸಂಗಾತಿಯನ್ನು ಕಂಡುಕೊಂಡಿದ್ದಾನೆ.
ಡಾನಾ ರೋಸ್ವಾಲ್ ಹೆಸರಿನ 21ರ ಹರೆಯದ ಹುಡುಗಿ ಈತನ ಪ್ರೇಮಪಾಶದಲ್ಲಿ ಬಿದ್ದಿದ್ದಾಳೆ. ಅಮೆರಿಕದ ಡೇಟಿಂಗ್ ಜಾಲತಾಣ ’ಸೀಕಿಂಗ್ ಅರೇಂಜ್ಮೆಂಟ್’ ಹೆಸರಿನ ಪೋರ್ಟಲ್ ಮೂಲಕ ಇಬ್ಬರೂ ಭೇಟಿಯಾಗಿದ್ದಾರೆ. ಈ ಪೋರ್ಟಲ್ ಅನ್ನು ಬ್ರಾಂಡನ್ 2006 ರಲ್ಲಿ ಆರಂಭಿಸಿದ್ದಾನೆ.
“ನನ್ನ ಹಾಗೂ ಡಾನಾಳ ಪ್ರೀತಿ ಅಮರವಾದದ್ದು, ಅದು ಈ ಜೀವನವನ್ನೂ ಮೀರಿ ನಿಂತಿದೆ. ಮದುವೆ ಎನ್ನುವುದು ಬಹು ಮುಖ್ಯವಾದ ಘಟ್ಟವಾಗಿದ್ದು, ನಾವು ಜಗತ್ತಿಗೆ ಸಂದೇಶ ಕಳುಹಿಸಲು ಇಷ್ಟ ಪಡುತ್ತೇವೆ. ಇದು ಸ್ಟಂಟ್ ಅಲ್ಲ, ಇದೊಂದು ಭಾರೀ ದೊಡ್ಡ ಹೊಣೆಗಾರಿಕೆ” ಎನ್ನುತ್ತಾನೆ ಬ್ರಾಂಡನ್.
ತಾನು ಇಷ್ಟು ಬಾರಿ ಮದುವೆಯಾದರೂ ಸಹ ಇದೇ ಮೊದಲ ಬಾರಿಗೆ, ಡಾನಾಳ ಮೋಹಪಾಶದಲ್ಲಿ ಬಿದ್ದ ಮೇಲಷ್ಟೇ ಪ್ರೀತಿ ಕಂಡುಕೊಂಡಿದ್ದಾಗಿ ಬ್ರಾಂಡನ್ ಹೇಳಿಕೊಂಡಿದ್ದಾನೆ.
“ಈ ವಾಸ್ತವದಲ್ಲಿ ನೀನು ಹಚ್ಚಿಕೊಳ್ಳಬಹುದಾದ ವಿಚಾರವೆಂದರೆ ಅದು ಪ್ರೇಮ ಮಾತ್ರ ಎಂದು ಆಕೆ ಹೇಳಿದ್ದಾಳೆ. ನಾಳೆ ನಾನು ದುಡ್ಡನ್ನೆಲ್ಲಾ ಕಳೆದುಕೊಂಡರೂ ಸಹ ನಾನು ಆಕೆಯೊಂದಿಗೆ ಪ್ರೇಮಸಾಗರದಲ್ಲಿ ಸಂಶೋಧನೆ ಮಾಡುತ್ತಾ ಇರುವವರೆಗೂ ಖುಷಿಯಾಗಿರುತ್ತೇನೆ. ನನಗೆ ಈ ಅಟ್ಯಾಚ್ಮೆಂಟ್ ಸಂಪತ್ತಿನ ಮೇಲೆ ಬಂದಿಲ್ಲ, ನಾವು ಒಬ್ಬರಿಗೊಬ್ಬರು ಸದಾ ಇರಲಿದ್ದೇವೆ” ಎಂದು ಹೇಳಿಕೊಂಡಿದ್ದಾನೆ 51ರ ವಯಸ್ಸಿನ ಪ್ರಣಯಿ.
ಈ ಹಿಂದೆ ಮೂರು ಬಾರಿ ಮದುವೆಯಾಗಿದ್ದ ಬ್ರಾಂಡನ್‌ಗೆ 1996, 2003 ಹಾಗೂ 2014ರಲ್ಲಿ ವಿಚ್ಛೇದನಗಳು ಆಗಿವೆ. ಇದೇ ವೇಳೆ ತನ್ನ ಕನಸಿನ ಪತಿಯನ್ನು ಕಂಡುಕೊಂಡಿರುವುದು ಭಾರೀ ಸಂತಸದ ವಿಚಾರ ಎನ್ನುವ ಡಾನಾ, “ತನ್ನನ್ನು ಮದುವೆಯಾಗಲು ಆತ ಕೇಳಿಕೊಂಡೊಡನೆಯೇ ನಾನು ಎಸ್ ಎಂದುಬಿಟ್ಟೆ,” ಎನ್ನುತ್ತಾಳೆ.