ಹಾಲು ತುಂಬಿದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ನೆಲಕ್ಕೆ ಬಿದ್ದು, ಅದರಲ್ಲಿದ್ದ ಸಾವಿರಾರು ಲೀಟರ್ ಹಾಲು ರಸ್ತೆಯಲ್ಲಿ ಹೊಳೆಯಂತೆ ಹರಿದಿದೆ. ಜನರು ಬಾಟಲಿ ಹಿಡಿದು ಸೋರುತ್ತಿದ್ದ ಹಾಲನ್ನು ತುಂಬಲು ಮುಗಿಬಿದ್ದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಯುಟರ್ನ್ ಬಳಿ ಟ್ಯಾಂಕರ್ ನೆಲಕ್ಕೆ ಉರುಳಿದ್ದು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪತ್ನಿಯನ್ನು ಗರ್ಭಿಣಿಯನ್ನಾಗಿಸಲು ಪೆರೋಲ್ ಪಡೆದ ಕೈದಿ
ತಮಿಳುನಾಡು ಮೂಲದ ಟ್ಯಾಂಕರ್ ಇದಾಗಿದ್ದು, 20ಸಾವಿರ ಲೀಟರ್ ಹಾಲನ್ನು, ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳಕ್ಕೆ ಸಾಗಿಸುತ್ತಿತ್ತು.
ಟ್ಯಾಂಕರ್ ಉರುಳಿದ ರಭಸಕ್ಕೆ ಟ್ಯಾಂಕರ್ ನಲ್ಲಿದ್ದ ಹಾಲು ಸಂಪೂರ್ಣವಾಗಿ ಸೋರಿ ಹೋಗಿದೆ. ಇದೇ ಮಾರ್ಗದಲ್ಲಿ ಸಾಗುತ್ತಿದ್ದ ವಾಹನ ಸವಾರರು, ಪ್ರಯಾಣಿಕರು ಬಾಟಲಿ, ಬಕೆಟ್, ಡಬ್ಬಿಗಳಲ್ಲಿ ಹಾಲನ್ನು ತುಂಬಿಕೊಂಡಿದ್ದಾರೆ.