ಮಂಡ್ಯ: ಭೀಕರ ಬರಗಾಲ, ಮಳೆ ಕೊರತೆ, ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರಿನಿಂದ ಬರಿದಾಗುತ್ತಿರುವ ಜಲಾಶಯ, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಂಕಷ್ಟ ಎದುರಾಗುತ್ತಿರುವ ಸಂದರ್ಭದಲ್ಲಿ ರೈತರಿಗೆ ಮನ್ಮುಲ್ ಬಿಗ್ ಶಾಕ್ ನೀಡಿದೆ.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರೈತರಿಂದ ಖರೀದಿಸುವ ಹಾಲಿನ ದರ ಇಳಿಸಿದ್ದು, ಪಶು ಆಹಾರಗಳ ದರ ಏರಿಕೆ ಮಾಡಿದೆ. ಹೈನುಗಾರಿಕೆಯನ್ನು ನಂಬಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪ್ರತಿ ಲೀಟರ್ ಹಾಲಿಗೆ 1.50 ರೂ ದರ ಇಳಿಸಿ ಮನ್ಮುಲ್ ಆದೇಶ ಹೊರಡಿಸಿದೆ. ಮನ್ಮುಲ್ ಈ ಹಿಂದೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ 33.50 ರೂ ನಿಗದಿ ಮಾಡಿತ್ತು. ಆದರೆ ಈಗ 1.50 ರೂ ಕಡಿತ ಮಾಡಿದೆ. ಪಶು ಆಹಾರ ಬೆಲೆ ಭಾರಿ ಏರಿಕೆಯಾಗಿದೆ.
ತೀವ್ರ ಬರಗಾಲ, ನೀರಿನ ಕೊರತೆಯಿರುವ ಈ ಸಂದರ್ಭದಲ್ಲಿ ಹಾಲಿನ ದರ ಇಳಿಸಿ, ಪಶು ಆಹಾರ ದರ ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.