ಬೆಂಗಳೂರು : ಹಾಲಿನ ದರ ಏರಿಕೆ ಆಗಿಲ್ಲ, ಹೆಚ್ಚುವರಿ 50 ಎಮ್ ಎಲ್ ಗೆ 2 ರೂ ಪಡೆಯುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ನಾವು ಬೆಲೆ ಏರಿಕೆ ಮಾಡಿಲ್ಲ, ಹಾಲಿನ ಪ್ರಮಾಣ ಹೆಚ್ಚಳ ಮಾಡಿ ಅದಕ್ಕೆ ತಗುಲುವ ವೆಚ್ಚದ ಮೊತ್ತ ಹೆಚ್ಚಿಸಿದ್ದೇವೆ ಅಷ್ಟೇ ಎಂದರು.
ನಮ್ಮ ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಿಲ್ಲ. ಒಂದು ಲೀಟರ್ ಪ್ಯಾಕೇಟಿನಲ್ಲಿ ಇನ್ನುಮುಂದೆ 1,050 ಮಿಲೀ, ಅರ್ಧ ಲೀಟರ್ ಪ್ಯಾಕೇಟಿನಲ್ಲಿ 550 ಮಿಲೀ ಹಾಲು ದೊರೆಯಲಿದ್ದು, ಈ 50 ಮಿಲೀ ಹೆಚ್ಚುವರಿ ಹಾಲಿಗೆ ಗ್ರಾಹಕರಿಂದ ರೂ.2 ಸಂಗ್ರಹಿಸಲಾಗುತ್ತದೆ. ಹೀಗಾಗಿ ಲೀಟರ್ ಪ್ಯಾಕೇಟ್ ರೂ.44, ಅರ್ಧ ಲೀಟರ್ ಪ್ಯಾಕೇಟ ರೂ.24ಕ್ಕೆ ಹೆಚ್ಚು ಹಾಲಿನ ಜೊತೆ ಲಭ್ಯವಾಗಲಿದೆ. ಕಳೆದ ಕೆಲವು ತಿಂಗಳಿಂದ ಹಾಲಿನ ಉತ್ಪಾದನೆ ಗಣನೀಯ ಏರಿಕೆಯಾಗಿದ್ದು, ನಿತ್ಯದ ಸರಾಸರಿ ಉತ್ಪಾದನೆ 89 ಲಕ್ಷ ಲೀಟರ್ ನಿಂದ 1 ಕೋಟಿ ಲೀಟರ್ ಸಮೀಪಕ್ಕೆ ಬಂದಿದೆ. ಡೈಲಿಗಳಲ್ಲಿ ರೈತರು ತರುವ ಹೆಚ್ಚುವರಿ ಹಾಲನ್ನು ನಿರಾಕರಿಸಬಾರದು ಜೊತೆಗೆ ಗ್ರಾಹಕರಿಗೂ ಹೊರೆಯಾಗದ ರೀತಿ ಹಾಲನ್ನು ತಲುಪಿಸುವ ಉದ್ದೇಶದಿಂದ ಕೆ.ಎಂ.ಎಫ್ ಸಂಸ್ಥೆಯು ಈ ನಿರ್ಣಯ ಕೈಗೊಂಡಿದೆ ಎಂದು ಸಿಎಂ ಹೇಳಿದರು.