
ಶಿವಮೊಗ್ಗ: ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಬರಬೇಕಿರುವ ಬಾಕಿ ಮೊತ್ತ ನೀಡದ ಕಾರಣಕ್ಕೆ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪೌಡರ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.
ಕಳೆದ ಆರು ತಿಂಗಳಿಂದ ಅಂಗನವಾಡಿ ಮಕ್ಕಳು, ಬಾಣಂತಿಯರು, ಗರ್ಭಿಣಿಯರು, ಚಿಕ್ಕ ಮಕ್ಕಳಿಗೆ ಹಾಲಿನ ಪೌಡರ್ ಸ್ಥಗಿತಗೊಂಡಿದ್ದು, ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಹೆಚ್ಚಾಗುತ್ತಿದೆ. ಅಂಗನವಾಡಿಗೆ ಬರುವ ಮಕ್ಕಳಿಗೆ ಹಾಲಿನ ಪೌಡರ್ ನಿಂದ ತಯಾರಿಸಿದ ಬಿಸಿ ಹಾಲು ನೀಡಲಾಗುತ್ತದೆ. ಅಂಗನವಾಡಿಗೆ ಬಾರದ ಮಕ್ಕಳಿಗೆ ತಿಂಗಳಿಗೆ ಒಮ್ಮೆ ಹಾಲಿನ ಪೌಡರ್ ಕೊಟ್ಟು ಕಳುಹಿಸಲಾಗುತ್ತಿದೆ. ಕೆಎಂಎಫ್ ಗೆ ಹಾಲಿನ ಪುಡಿ ಪೂರೈಕೆ ಮಾಡಿದ ಬಾಕಿ ಹಣ ಪಾವತಿಯಾಗದ ಕಾರಣಕ್ಕೆ ಕಳೆದ ಆರು ತಿಂಗಳಿಂದ ಹಾಲಿನ ಪೌಡರ್ ಪೂರೈಕೆ ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.