alex Certify ದಿನದ ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ…..? ದೇಹ ಫಿಟ್‌ & ಫೈನ್‌ ಆಗಿರಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನದ ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ…..? ದೇಹ ಫಿಟ್‌ & ಫೈನ್‌ ಆಗಿರಲು ಹೀಗೆ ಮಾಡಿ

ಹಾಲು ಕುಡಿಯುವುದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಾಲಿನಲ್ಲಿ ಥಯಾಮಿನ್, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ನಿಕೋಟಿನಿಕ್ ಆಮ್ಲದಂತಹ ಪೋಷಕಾಂಶಗಳಿವೆ. ಇದರಿಂದಾಗಿ ನಮ್ಮ ದೇಹವು ಬಲವಾಗಿ ಮತ್ತು ಸದೃಢವಾಗಿರುತ್ತದೆ. ಆದರೆ ಯಾವ ಸಮಯದಲ್ಲಿ ಹಾಲನ್ನು ಸೇವಿಸುವುದು ದೇಹಕ್ಕೆ ಉತ್ತಮ ಎಂಬುದನ್ನು ತಿಳಿದುಕೊಳ್ಳಬೇಕು. ಸೂಕ್ತ ಸಮಯದಲ್ಲಿ ಹಾಲು ಸೇವನೆ ಮಾಡಿದರೆ ದೇಹಕ್ಕೆ ಗರಿಷ್ಠ ಪ್ರಯೋಜನ ಸಿಗುತ್ತದೆ.  

ಹಾಲು ಕುಡಿಯಲು ಸರಿಯಾದ ಸಮಯ

ಕ್ರೀಡಾಪಟುಗಳು ಅಥವಾ ಬಾಡಿ ಬಿಲ್ಡ್‌ ಮಾಡಲು ಬಯಸುವವರು ಹಗಲಿನಲ್ಲಿ ಹಾಲು ಕುಡಿಯಬೇಕು. ಇದರಿಂದ ಇಡೀ ದಿನ ಅವರಲ್ಲಿ ಎನರ್ಜಿ ತುಂಬಿರುತ್ತದೆ. ದೇಹವು ದಿನವಿಡೀ ಚುರುಕುತನದಿಂದ ಕೂಡಿರುತ್ತದೆ. ಹೊಟ್ಟೆ ತುಂಬಿದ ಅನುಭವವಾಗುತ್ತದೆ ಮತ್ತು ಬೇಗನೆ ಹಸಿವಾಗುವುದಿಲ್ಲ.

ಮಕ್ಕಳಿಗೆ ಸರಿಯಾದ ಸಮಯ ಬೆಳಗ್ಗೆ 

ಮಕ್ಕಳಿಗೆ ಬೆಳಗ್ಗೆ ಪೂರ್ಣ ಕೆನೆ ಹಾಲು ನೀಡುವುದು ಉತ್ತಮ. ಈ ಸಮಯದಲ್ಲಿ ಹಾಲು ಕುಡಿಯುವುದು ಅವರ ದೇಹದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ದಿನದ ಕ್ಯಾಲ್ಸಿಯಂ ಅಗತ್ಯವನ್ನು ಸಹ ಪೂರೈಸಬಹುದು. ಬೆಳಗ್ಗೆ ಹಾಲು ಕುಡಿಯುವುದರಿಂದ ಮಕ್ಕಳ ದೇಹಕ್ಕೆ ಪ್ರೊಟೀನ್, ಮೆಗ್ನೀಷಿಯಂ, ಫಾಸ್ಫರಸ್, ಪೊಟ್ಯಾಸಿಯಮ್ ಪೂರೈಕೆಯಾಗುತ್ತವೆ. ಇದರಿಂದಾಗಿ ದಿನವಿಡೀ ಸುಸ್ತಾಗದೆ ಆಟವಾಡಬಹುದು.

ಹಿರಿಯರು ರಾತ್ರಿ ಹಾಲು ಕುಡಿಯಬೇಕು

ವಯಸ್ಸಾದವರು ಮುಂಜಾನೆಯ ಬದಲು ಸಂಜೆ ಹಾಲು ಕುಡಿಯುವುದು ಒಳ್ಳೆಯದು. ಇದಕ್ಕೆ ಕಾರಣ ಅವರ ದೈಹಿಕ ಚಟುವಟಿಕೆಗಳು ತುಂಬಾ ಕಡಿಮೆ, ಜೊತೆಗೆ ಅವರ ಜೀರ್ಣ ಶಕ್ತಿಯೂ ದುರ್ಬಲವಾಗಿರುತ್ತದೆ. ಆದ್ದರಿಂದ ಬೆಳಗ್ಗೆ ಹಾಲು ಕುಡಿದರೆ ಹೊಟ್ಟೆಯು ದಿನವಿಡೀ ಭಾರವಾಗಿರುತ್ತದೆ. ರಾತ್ರಿಯಲ್ಲಿ ಹಾಲು ಕುಡಿಯುವುದರಿಂದ ಅವರು ಚೆನ್ನಾಗಿ ನಿದ್ರೆ ಮಾಡುತ್ತಾರೆ. ಎಲುಬುಗಳೂ ಗಟ್ಟಿಯಾಗಿ ಉಳಿಯುತ್ತವೆ.

ಮಧುಮೇಹ ಇರುವವರು ರಾತ್ರಿ ಹಾಲು ಕುಡಿಯಬೇಡಿ

ರಾತ್ರಿಯಲ್ಲಿ ಚಡಪಡಿಕೆ ಅಥವಾ ನಿದ್ರಾಹೀನತೆಯ ಸಮಸ್ಯೆ ಇರುವವರು ಬೆಚ್ಚಗಿನ ಹಾಲು ಕುಡಿದು ಮಲಗಬೇಕು. ಹೀಗೆ ಮಾಡುವುದರಿಂದ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವು ದೇಹದಲ್ಲಿ ಬಿಡುಗಡೆಯಾಗುತ್ತದೆ. ಈ ಆಮ್ಲದ ಬಿಡುಗಡೆಯು ನಿದ್ರೆಗೆ ಸಹಾಯ ಮಾಡುತ್ತದೆ, ಹಾಗೆಯೇ ಮರುದಿನ ಹೊಟ್ಟೆಯು ಸ್ವಚ್ಛವಾಗಿರುತ್ತದೆ. ರಾತ್ರಿ ಬಿಸಿ ಹಾಲನ್ನು ಕುಡಿಯುವುದರಿಂದ ಒತ್ತಡದಿಂದಲೂ ಪರಿಹಾರ ಸಿಗುತ್ತದೆ. ಆದರೆ ಮಧುಮೇಹ ಸಮಸ್ಯೆ ಇರುವವರು ರಾತ್ರಿ ಹಾಲು ಕುಡಿಯುವುದನ್ನು ತಪ್ಪಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...