65 ಉಕ್ರೇನ್ ಯುದ್ಧ ಕೈದಿಗಳನ್ನು ಹೊತ್ತ ರಷ್ಯಾದ ಐಎಲ್ -76 ಮಿಲಿಟರಿ ಸಾರಿಗೆ ವಿಮಾನವು ಉಕ್ರೇನ್ ಗಡಿಯಲ್ಲಿರುವ ಪಶ್ಚಿಮ ಬೆಲ್ಗೊರೊಡ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ರಷ್ಯಾ ಬುಧವಾರ ತಿಳಿಸಿದೆ.
ಸೆರೆಹಿಡಿಯಲಾದ 65 ಉಕ್ರೇನ್ ಸೇನಾ ಸೈನಿಕರು, ಆರು ಸಿಬ್ಬಂದಿ ಮತ್ತು ಮೂವರು ಬೆಂಗಾವಲುಗಳನ್ನು ವಿನಿಮಯಕ್ಕಾಗಿ ಬೆಲ್ಗೊರೊಡ್ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿದೆ.
ರಷ್ಯಾದ ಇಲ್ಯುಶಿನ್ ಐಎಲ್ -76 ಮಿಲಿಟರಿ ವಿಮಾನವು ಬುಧವಾರ ಉಕ್ರೇನ್ ಗಡಿಯ ಬಳಿ ಅಪಘಾತಕ್ಕೀಡಾಗಿದೆ. ಇದು ಉಕ್ರೇನ್ ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲು ಕರೆದೊಯ್ಯುತ್ತಿತ್ತು ಎಂದು ಮೂಲಗಳು ತಿಳಿಸಿದೆ.