‘ಮಿಲೇ ಸುರ್ ಮೇರಾ ತುಮ್ಹಾರ, ತೋ ವೋ ಸುರ್ ಬನೇ ಹಮಾರ ‘ ಎಂದು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ 1980ರ ದಶಕದ ಜನಪ್ರಿಯ ಗೀತೆಯ ಮರುಸೃಷ್ಟಿಯನ್ನು ಭಾರತೀಯ ರೈಲ್ವೆ ಇಲಾಖೆ ಮಾಡಿದೆ.
75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ದೇಶಾದ್ಯಂತ ‘ಆಜಾದಿ ಕಾ ಅಮೃತ ಮಹೋತ್ಸವ’ ಕಾರ್ಯಕ್ರಮ ಅಡಿಯಲ್ಲಿ ಜನಪ್ರಿಯ ಗೀತೆಯ ಮರುಚಿತ್ರಣ ನಡೆದು, ವಿಡಿಯೋ ಬಿಡುಗಡೆಯಾಗಿದೆ.
ರೈಲ್ವೆ ಇಲಾಖೆಯ ಟ್ವಿಟರ್ ಖಾತೆಯಲ್ಲಿ ಈ ಗೀತೆಯ ವಿಡಿಯೋ ಇದ್ದು, ಆಸಕ್ತರು ಕಾಣಬಹುದಾಗಿದೆ. ಈ ಬಾರಿ ಒಟ್ಟು 13 ಭಾಷೆಗಳಲ್ಲಿ ಗೀತೆಯನ್ನು ಚಿತ್ರಣ ಮಾಡಿ, ವಿಡಿಯೋ ಬಿಡುಗಡೆ ಮಾಡಲಾಗಿರುವುದು ವಿಶೇಷ.
SHOCKING: ರೈಲ್ ನಲ್ಲೇ ಮಹಿಳೆ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ, ಒಳ ಉಡುಪು ಹೊರಗೆಳೆದ NCB ಅಧಿಕಾರಿ ಅರೆಸ್ಟ್
1988ರಲ್ಲಿ ಅಂದಿನ ಸ್ವಾತಂತ್ರ್ಯ ದಿನದಂದು ’ಮಿಲೇ ಸುರ್ ಮೇರಾ ತುಮ್ಹಾರ’ ಗೀತೆ ಮೊದಲ ಬಾರಿಗೆ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ನಂತರ ಗೀತೆಯ ಅರ್ಥ, ರಾಗಗಳೆಲ್ಲವೂ ಜನರ ಮನದಾಳಕ್ಕೆ ಇಳಿದು, ಗೀತೆಯು ಮನೆಮಾತಾಗಿತ್ತು.
ಹೊಸ ವಿಡಿಯೋದಲ್ಲಿ ಒಲಿಂಪಿಕ್ಸ್ ವಿಜೇತೆ ಪಿ.ವಿ. ಸಿಂಧು ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಇಲಾಖೆ ಸಿಬ್ಬಂದಿಯನ್ನು ಕಾಣಬಹುದಾಗಿದೆ.
https://twitter.com/RailMinIndia/status/1446357274797088771?ref_src=twsrc%5Etfw%7Ctwcamp%5Etweetembed%7Ctwterm%5E1446357274797088771%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fmile-sur-mera-tumhara-indian-railways-recreates-the-iconic-80s-song-watch-viral-video-here-5046587%2F