alex Certify ಶಿಲ್ಪಾ ಪತಿಯ ಮತ್ತೊಂದು ರಹಸ್ಯ ಬಿಚ್ಚಿಟ್ಟ ಬಾಲಿವುಡ್‌ ಗಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಲ್ಪಾ ಪತಿಯ ಮತ್ತೊಂದು ರಹಸ್ಯ ಬಿಚ್ಚಿಟ್ಟ ಬಾಲಿವುಡ್‌ ಗಾಯಕ

Raj Kundra Arrest: Mika Singh reacts to Raj Kundra's arrest in production of pornographic films case, reveals he has seen one of the apps

ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ರಾಜ್ ಕುಂದ್ರಾ ಪ್ರಕರಣದ ಕುರಿತು ಬಾಲಿವುಡ್ ಗಾಯಕ ಮಹತ್ವದ ಹೇಳಿಕೆ ಹೊರಹಾಕಿದ್ದಾರೆ.

ಅ್ಯಪ್‌ಗಳಲ್ಲಿ ಅಶ್ಲೀಲ ವಿಡಿಯೋ ಪ್ರಸಾರ‌ ಮಾಡಿದ ಸಂಬಂಧ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಸೋಮವಾರ ರಾತ್ರಿ ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.

ಪೊಲೀಸರು ಕುಂದ್ರಾ ಅವರನ್ನು ‘ಪ್ರಮುಖ ಸಂಚುಕೋರ’ ಎಂದು ಹೆಸರಿಸಿದ್ದಾರೆ ಮತ್ತು ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಗೆ ವಿಧಿಸಲಾಗಿದೆ.

ಈ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ಬಾಲಿವುಡ್ ಗಾಯಕ ಮಿಕಾ ಸಿಂಗ್ ಅವರು ರಾಜ್ ಕುಂದ್ರಾರ ಮೊಬೈಲ್ ಆ್ಯಪ್ ಒಂದನ್ನು ನೋಡಿದ್ದಾಗಿ ಬಹಿರಂಗಪಡಿಸಿದ್ದಾರೆ.

ಒಲಂಪಿಕ್ಸ್ ನಲ್ಲಿ ʼಸೆಕ್ಸ್ʼ ನಿಷೇಧ ಸಾಧ್ಯವೇ ಇಲ್ಲವೆಂದ ಮಾಜಿ ಆಟಗಾರರು

ಮುಂದೆ ಏನಾಗುತ್ತದೆ ಎಂದು ನೋಡೋಣ. ಏನಾಗುತ್ತದೆಯೋ ಅದು ಒಳ್ಳೆಯದಕ್ಕಾಗಿ ಆಗುತ್ತದೆ. ಅವನ ಆ್ಯಪ್ ಬಗ್ಗೆ ನನಗೆ ಹೆಚ್ಚಿನ ಜ್ಞಾನವಿಲ್ಲ. ನಾನು ಅವರ ಅಪ್ಲಿಕೇಶನ್‌ಗಳಲ್ಲಿ ಒಂದನ್ನು ನೋಡಿದ್ದೇನೆ ಎಂದು ಮಿಕಾ ಸಿಂಗ್ ಹೇಳಿಕೊಂಡಿದ್ದಾರೆ.

ಮುಂಬೈನ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಮಿಲಿಂದ್ ಭಾರಂಬೆ ತಮ್ಮ ತನಿಖೆಯ ಸಮಯದಲ್ಲಿ ಕಂಡುಕೊಂಡ ಮಾಹಿತಿ ಬಹಿರಂಗಪಡಿಸಿದ್ದಾರೆ.

ಹಲವಾರು ಹೊಸ ನಟಿಯರಿಗೆ ಕಿರುಚಿತ್ರ, ವೆಬ್ ಸರಣಿ ಮತ್ತು ಚಲನಚಿತ್ರಗಳಲ್ಲಿ ಕೆಲಸದ ಆಫರ್ ನೀಡಿದ್ದು, ಅವರನ್ನು ಆಡಿಷನ್‌ಗಾಗಿ ಕರೆದು ಬೋಲ್ಡ್ ಸೀನ್ ಮಾಡಲು ಆಯ್ಕೆ ಮಾಡಿದ್ದು, ಅರೆ ನಗ್ನ ಮತ್ತು ನಂತರ ಪೂರ್ಣ-ನಗ್ನ ಶೂಟ್ ಮಾಡಲಾಗಿದೆ. ಅವರಲ್ಲಿ ಕೆಲವರು ಇದನ್ನು ತೀವ್ರವಾಗಿ ವಿರೋಧಿಸಿದ್ದರು ಮತ್ತು ಪೊಲೀಸರನ್ನು ಸಂಪರ್ಕಿಸಿದ್ದರು.

ಈ ಪ್ರಕರಣದಲ್ಲಿ ಟಿವಿ ನಟಿ ಗೆಹ್ನಾ, ಯಾಸ್ಮಿನ್ ಆರ್ ಖಾನ್, ಮೋನು ಜೋಶಿ, ಪ್ರತಿಭಾ ನಲವಾಡೆ, ಎಂ ಅತೀಫ್ ಅಹ್ಮದ್, ದೀಪಂಕರ್ ಪಿ ಖಾಸ್ನವಿಸ್, ಭಾನುಸೂರ್ಯ ಠಾಕೂರ್, ತನ್ವೀರ್ ಹಶ್ಮಿ, ಮತ್ತು ಉಮೇಶ್ ಕಾಮತ್ ಬಂಧಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...