ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್, ಋತುಮಾನದ ಹಣ್ಣುಗಳನ್ನು ನೀಡಲಾಗುತ್ತದೆ. ಪಶ್ಚಿಮ ಬಂಗಾಳದ ಶಾಲೆಗಳಲ್ಲಿ ಸಾಮಾನ್ಯ ಅಕ್ಕಿ, ದಾಲ್ ಮತ್ತು ತರಕಾರಿಗಳೊಂದಿಗೆ ಚಿಕನ್, ಮೊಟ್ಟೆ ಮತ್ತು ಋತುಮಾನದ ಹಣ್ಣುಗಳನ್ನು ಏಪ್ರಿಲ್ ವರೆಗೆ ಮಧ್ಯಾಹ್ನದ ಊಟದಲ್ಲಿ ನೀಡಲಾಗುವುದು ಎಂದು ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಹೆಚ್ಚುವರಿ ಪೌಷ್ಟಿಕಾಂಶ ಮೊಟ್ಟೆ, ಚಿಕನ್, ಹಣ್ಣುಗಳನ್ನು ಒಳಗೊಂಡಿರುತ್ತದೆ. ಅಪೌಷ್ಟಿಕತೆಯನ್ನು ಪರಿಹರಿಸಲು ವಾರಕ್ಕೊಮ್ಮೆ ಜನವರಿಯಿಂದ ಏಪ್ರಿಲ್ ವರೆಗೆ ನಾಲ್ಕು ತಿಂಗಳವರೆಗೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯಾದ್ಯಂತ ಶಾಲೆಗಳಲ್ಲಿ ದಾಖಲಾದ 11.6 ಮಿಲಿಯನ್ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಪಡೆಯುತ್ತಾರೆ. ಹೆಚ್ಚುವರಿ ಆಹಾರ ನೀಡಲು 371 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.