ಬೆಂಗಳೂರು : ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಸಿದ್ಧಪಡಿಸುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಪ್ರಾಮಾಣಿತ ಕಾರ್ಯಕಾರಿ ವಿಧಾನಗಳನ್ನು (ಎಸ್‌ಒಪಿ) ರೂಪಿಸಿದೆ.
ಬಿಸಿಯೂಟ ಬಡಿಸುವಾಗ ಸುರಕ್ಷತೆಗೆ ಶಿಕ್ಷಣ ಇಲಾಖೆ ಒತ್ತು ನೀಡಲಾಗಿದ್ದು, ರಾಜ್ಯದ ಎಲ್ಲ ಶಾಲೆಗಳಿಗೆ ‘ಪ್ರಮಾಣಿತ ಕಾರ್ಯಾಚರಣೆಯ ವಿಧಾನ’ ಪಾಲಿಸಲು ಸೂಚನೆ
- ಅಡುಗೆ ತಯಾರಕರು ಎಪ್ರಾನ್, ತಲೆಟೋಪಿ ಧರಿಸಬೇಕು
- ವಿದ್ಯಾರ್ಥಿಗಳನ್ನು ಸ್ವಚ್ಛವಾದ ಜಾಗದಲ್ಲಿ ಕೂರಿಸಬೇಕು
- ಪ್ಲೇಟ್‌ನಿಂದ ಆಹಾರ ಹೊರಚೆಲ್ಲದಂತೆ ಬಡಿಸಬೇಕು
- ಆಹಾರ ಬಡಿಸುವುದಕ್ಕೆ ಚಿಕ್ಕ ಪಾತ್ರೆ ಬಳಸಬೇಕು
- ಒಲೆ ಮೇಲಿನ ಬಿಸಿ ಪಾತ್ರೆಗಳನ್ನುನೆಲಕ್ಕಿಡಬಾರದು