
ವಿಶ್ವದ ದಿಗ್ಗಜ ಸಾಫ್ಟ್‌ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರ ಪುತ್ರ ಝೈನ್ ಸೋಮವಾರ ಬೆಳಗ್ಗೆ ನಿಧನರಾಗಿದ್ದರೆಂದು, ಕಂಪನಿಯು ತಿಳಿಸಿದೆ. 26 ವರ್ಷಕ್ಕೆ ಇಹಲೋಕ ತ್ಯಜಿಸಿರುವ ಝೈನ್, ಹುಟ್ಟಿದಾಗಿನಿಂದಲು ಸೆರೆಬ್ರಲ್ ಪಾಲ್ಸಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಸತ್ಯ ಹಾಗೂ ಅನು ದಂಪತಿಯ ಮಗ ಝೈನ್ ಸೋಮವಾರದಂದು ಅದೇ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮೈಕ್ರೋಸಾಫ್ಟ್ ಸಂಸ್ಥೆ ತಮ್ಮ ಸಿಬ್ಬಂದಿಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದಾರೆಂದು ತಿಳಿದು ಬಂದಿದೆ.
BIG NEWS: ಉಕ್ರೇನ್ ರಾಜಧಾನಿಯನ್ನು ಮತ್ತಷ್ಟು ಆಕ್ರಮಿಸಿದ ರಷ್ಯಾ ಪಡೆ…! ಉಪಗ್ರಹ ಚಿತ್ರದಲ್ಲಿ ಚಲನವಲನ ಸೆರೆ
ಸತ್ಯ ನಾಡೆಲ್ಲಾ ಅವರು 2014ರಲ್ಲಿ ಮೈಕ್ರೋಸಾಫ್ಟ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದಿನಿಂದಲೂ ಸಾಫ್ಟ್‌ವೇರ್ ಬಳಸುವ ವಿಕಲಚೇತನರಿಗೆ ಉತ್ತಮ ಸೇವೆ ನೀಡಲು ಹಲವು ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ಇಡೀ ಕಂಪನಿಯನ್ನು ಸತ್ಯ, ಕೇಂದ್ರಿಕರಿಸಿದ್ದಾರೆ. ಈ ವೇಳೆ ತಮ್ಮ ಮಗನ ಬಗ್ಗೆ ಹೇಳಿಕೊಂಡು, ಆತನ ಬೆಳವಣಿಗೆಗೆ ಸಹಾಯಕವಾದ ಹಲವು ಅಂಶಗಳನ್ನ ಉಲ್ಲೇಖಿಸಿದ್ದಾರೆ ಎಂದು ಗ್ರೀಫ್ ಕಾರ್ಡ್ ನಲ್ಲಿ ತಿಳಿಸಲಾಗಿದೆ.