alex Certify 27 ವರ್ಷಗಳ ಬಳಿಕ ‘ಬಂದ್’ ಆಗಲಿದೆ ಇಂಟರ್ನೆಟ್ ಎಕ್ಸ್ ಪ್ಲೋರರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

27 ವರ್ಷಗಳ ಬಳಿಕ ‘ಬಂದ್’ ಆಗಲಿದೆ ಇಂಟರ್ನೆಟ್ ಎಕ್ಸ್ ಪ್ಲೋರರ್…!

1995 ರಲ್ಲಿ ಬಳಕೆಗೆ ಬಂದ ಮೈಕ್ರೋಸಾಫ್ಟ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ ಬ್ರೌಸರ್ ಜೂನ್ 15ರಿಂದ ಸ್ಥಗಿತಗೊಳ್ಳಲಿದೆ. ವಿಂಡೋಸ್ 95 ಜೊತೆಗೆ ಬ್ರೌಸರ್ ಬಳಕೆಯಲ್ಲಿದ್ದು, ‘ಗೂಗಲ್’ ಬಳಕೆ ಹೆಚ್ಚಾಗುತ್ತಿದ್ದಂತೆ ಇದರ ಜನಪ್ರಿಯತೆ ಕುಸಿತ ಕಂಡಿತ್ತು.

2003ರಲ್ಲಿ ಜಗತ್ತಿನ ಶೇಕಡಾ 93ರಷ್ಟು ಇಂಟರ್ನೆಟ್ ಬಳಕೆದಾರರು ಮೈಕ್ರೋಸಾಫ್ಟ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ ಬಳಸಿದ್ದು, ಆನಂತರ ಇತರೆ ಬ್ರೌಸರ್ ಗಳ ಬಳಕೆ ಏರಿಕೆಯಾಗಿತ್ತು. ಹೀಗಾಗಿ 2016ರಲ್ಲಿ ಮೈಕ್ರೋಸಾಫ್ಟ್ ‘ಎಡ್ಜ್’ ಎಂಬ ಹೊಸ ಬ್ರೌಸರ್ ಬಿಡುಗಡೆ ಮಾಡಿತ್ತು.

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್‌ ಕುಸಿತ

ಇಂಟರ್ನೆಟ್ ಎಕ್ಸ್ ಪ್ಲೋರರ್ ಜೂನ್ 15ರಿಂದ ಸ್ಥಗಿತಗೊಳಿಸುವ ಕುರಿತಂತೆ ಮೈಕ್ರೋಸಾಫ್ಟ್ ಮಾಹಿತಿ ನೀಡಿದ ಬಳಿಕ ಇಂಟರ್ನೆಟ್ ಬಳಕೆದಾರರು ಇದಕ್ಕೆ ಭಾವಪೂರ್ಣ ವಿದಾಯ ಹೇಳುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಹಾಕುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...