alex Certify ಮಗನಿಗೆ ಚಾರ್ಲ್ಸ್ ಡಾರ್ವಿನ್ ಉಡುಗೊರೆಯಾಗಿ ನೀಡಿದ್ದ ಸೂಕ್ಷ್ಮದರ್ಶಕ ಹರಾಜಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನಿಗೆ ಚಾರ್ಲ್ಸ್ ಡಾರ್ವಿನ್ ಉಡುಗೊರೆಯಾಗಿ ನೀಡಿದ್ದ ಸೂಕ್ಷ್ಮದರ್ಶಕ ಹರಾಜಿಗೆ

ಚಾರ್ಲ್ಸ್ ಡಾರ್ವಿನ್ ತನ್ನ ಮಗ ಲಿಯೊನಾರ್ಡ್‌ಗೆ ಮೈಕ್ರೋಸ್ಕೋಪ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದು ಸುಮಾರು 200 ವರ್ಷಗಳಿಂದ ಕುಟುಂಬದಲ್ಲೇ ಉಳಿದಿದ್ದು, ಡಿಸೆಂಬರ್‌ನಲ್ಲಿ ಹರಾಜಿಗಿಡಲು ಕುಟುಂಬ ಮುಂದಾಗಿದೆ.

ಹರಾಜಿನಲ್ಲಿ $ 480,000 ವರೆಗೆ (ಸುಮಾರು 3,60,16,800 ರೂ.ಗಳು) ಪಡೆಯುವ ನಿರೀಕ್ಷೆಯಿದೆ.

ಈ ಉಪಕರಣವನ್ನು ಚಾರ್ಲ್ಸ್ ಗೌಲ್ಡ್ 1825 ರ ಸುಮಾರಿಗೆ ಕ್ಯಾರಿಗಾಗಿ ವಿನ್ಯಾಸಗೊಳಿಸಿದ್ದರು. ಬ್ರಿಟಿಷ್ ನೈಸರ್ಗಿಕವಾದಿಗೆ ಸಂಬಂಧಿಸಿದ ಉಳಿದಿರುವ ಆರರಲ್ಲಿ ಈ ಮೈಕ್ರೋಸ್ಕೋಪ್ ಒಂದಾಗಿದೆ. ಕ್ರಿಸ್ಟೀಸ್ ಪ್ರಕಾರ, ಅದರ ತಯಾರಿಕೆಯ ದಿನಾಂಕವು ಡಾರ್ವಿನ್ ಜೂಫೈಟ್ಸ್, ಹವಳ ಮತ್ತು ಸಮುದ್ರ ಎನಿಮೋನ್ ನಂತಹ ಜೀವಿಗಳನ್ನು ಅಧ್ಯಯನ ಮಾಡುತ್ತಿದ್ದ ಸಮಯಕ್ಕೆ ಹೊಂದಿಕೆಯಾಗುತ್ತದೆ.

“ಇದನ್ನು ನೋಡುವುದು ಮತ್ತು 1820 ಮತ್ತು 30 ರ ದಶಕದಲ್ಲಿ ಡಾರ್ವಿನ್ ಕಾಣುವ ಸೂಕ್ಷ್ಮ ಪ್ರಪಂಚವನ್ನು ನೋಡುವುದು ಮೈ ಜುಮ್ಮೆನುವಂತಿದೆ” ಎಂದು ವೈಜ್ಞಾನಿಕ ಉಪಕರಣಗಳು, ಗ್ಲೋಬ್ಸ್ & ನ್ಯಾಚುರಲ್ ಹಿಸ್ಟರಿ ವಿಭಾಗದ ಮುಖ್ಯಸ್ಥ ಜೇಮ್ಸ್ ಹಿಸ್ಲಾಪ್ ಹೇಳಿದ್ದಾರೆ.

ಚಾರ್ಲ್ಸ್ ಡಾರ್ವಿನ್ 1859 ರಲ್ಲಿ ‘ಆನ್ ದಿ ಒರಿಜಿನ್ ಆಫ್ ಸ್ಪೀಸೀಸ್’ ಎಂಬ ಅದ್ಭುತ ಕೃತಿಯನ್ನು ಪ್ರಕಟಿಸಿದ್ದಾರೆ. ಸೂಕ್ಷ್ಮದರ್ಶಕವನ್ನು ಕ್ರಿಸ್ಟಿಯ ಅಮೂಲ್ಯ ಪುಸ್ತಕಗಳು ಮತ್ತು ಹಸ್ತಪ್ರತಿಗಳ ಹರಾಜಿನಲ್ಲಿ ಡಿಸೆಂಬರ್ 15 ರಂದು ನೀಡಲಾಗುವುದು ಮತ್ತು 250,000 – 350,000 ಪೌಂಡ್‌ಗಳ ($ 343,050 – $ 480,270) ಬೆಲೆ ಅಂದಾಜನ್ನು ಹೊಂದಿದೆ.

“ಚಾರ್ಲ್ಸ್ ಡಾರ್ವಿನ್ ವಿಜ್ಞಾನದ ಇತಿಹಾಸದಲ್ಲಿ ಪ್ರಖ್ಯಾತಿ ಪಡೆದವರಲ್ಲಿ ಒಬ್ಬರಾಗಿದ್ದಾರೆ. ಮತ್ತು ಡಾರ್ವಿನ್‌ಗೆ ಸಂಬಂಧಿಸಿದ ಸಂಗ್ರಾಹಕರು ನಿಜವಾಗಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದಾರೆ” ಎಂದು ಹಿಸ್ಲಾಪ್ ಹೇಳಿದರು

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...