ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತರಲು ಮುಂದಾಗಿದೆ. ಇದೀಗ ಸುಗ್ರೀವಾಜ್ಞೆಯ ಹೆಸರನ್ನು ಬದಲಿಸಲು ಸರ್ಕಾರ ತೀರ್ಮಾನಿಸಿದೆ.
ಮೈಕ್ರೋ ಸಾಲ ಮತ್ತು ಸಣ್ಣಸಾಲ (ದಬ್ಬಾಳಿಕೆ ಕ್ರಮಗಳ ತಡೆಗಟ್ಟುವಿಕೆ) ಸುಗ್ರೀವಾಜ್ಞೆ ಎಂದು ಹೆಸರು ಬದಲಿಸಿದೆ. ಮೈಕ್ರೋ ಫೈನಾನ್ಸ್ ಪದ ಬಳಸಿದರೆ ಸಮಸ್ಯೆ ಆಗಬಹುದು ಎಂಬ ಲೆಕ್ಕಾಚಾರದಿಂದ ಹೆಸರು ಬದಲಾವಣೆ ಮಾಡಲು ಮುಂದಾಗಿದೆ.
ಮೈಕ್ರೋ ಫೈನಾನ್ಸ್ ಗಳು RBI ಅಡಿಯಲ್ಲಿ ನೋಂದಣಿಯಾಗಿರುತ್ತವೆ. ಹೀಗಾಗಿ ಅವುಗಳ ವಿರುದ್ಧ ಕಾನೂನು ಕ್ರಮ ಜರಿಗಿಸುವುದು ಕಷ್ಟವಾಗುತ್ತದೆ. ಹೀಗಾಗಿ ಸುಗ್ರೀವಾಜ್ಞೆಯಲ್ಲಿ ಸಣ್ಣ ಸಾಲ ಎಂಬ ಪದವನ್ನು ಸರ್ಕಾರ ಸೇರಿಸಿದೆ ಎಂದು ತಿಳಿದುಬಂದಿದೆ.