![](https://kannadadunia.com/wp-content/uploads/2024/06/death.1.2681105.jpg)
ವಿಜಯಪುರ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಸಲಾದಹಳ್ಳಿಯಲ್ಲಿ ನಡೆದಿದೆ.
ಬಸನಗೌಡ ಬಿರಾದಾರ್ ಆತ್ಮಹತ್ಯೆಗೆ ಶರಣಾಗಿರುವ ರೈತ. ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸನಗೌಡ ಬಿರಾದಾರ್ ಹಲವು ಫೈನಾನ್ದ್ಸ್ ಕಂಪನಿಯಲ್ಲಿ ಸಾಲ ಮಾಡಿಕೊಂಡಿದ್ದರು.
L&Tಯಿಂದ 1.10 ಲಕ್ಷ, ನವಚೇತನ ಫೈನಾನ್ಸ್ ನಿಂದ 1 ಲಕ್ಷ, ESF ಫೈನಾನ್ಸ್ ನಿಂದ 75 ಸಾವಿರ ಸಾಲ, ಚೈತನ್ಯ ಫೈನಾನ್ಸ್ ನಲ್ಲಿ 1 ಲಕ್ಷ , RBL ಫೈನಾನ್ಸ್ 1 ಲಕ್ಷ, ಸುಗಮಾ ಫೈನಾನ್ಸ್ 50 ಸಾವಿರ, ಧರ್ಮಸ್ಥಳ ಸಂಘದಲ್ಲಿ 1 ಲಕ್ಷ ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡಲಾಗದೇ ಫೈನಾನ್ಸ್ ನವರ ಕಿರುಕುಳಕ್ಕೆ ನೊಂದು ರೈತ ನೇಣಿಗೆ ಶರಣಾಗಿದ್ದಾರೆ.
ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.