ಚೆನ್ನೈ: ಮಿಚಾಂಗ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಮುಂದುವರೆದಿದ್ದು, ಜನಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡಿದೆ. ಮಿಚಾಂಗ್ ಚಂಡಮಾರುತದ ಹೊಡೆತಕ್ಕೆ ತಮಿಳುನಾಡಿನಲ್ಲಿ 8 ಜನರು ಸಾವನ್ನಪ್ಪಿದ್ದಾರೆ.
ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ರಸ್ತೆಗಳಲ್ಲಿ ಪ್ರವಾಹದಂತೆ ನೀರು ಉಕ್ಕಿಹರಿಯುತ್ತಿದೆ. ವಾಲಾಜಾ ರಸ್ತೆ, ಮೌಂಟ್ ರೋಡ್, ಅಣ್ಣಾ ಸಲೈ, ಚೆಪಾಕ್, ಓಮಂಡೂರರ್ ಸೇರಿದಂತೆ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಬಸ್, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣಗಳಿಗೂ ನೀರು ನುಗ್ಗಿದೆ. ಚೆನ್ನೈ ನಲ್ಲಿ 24 ಗಂಟೆಗಳ ಕಾಲ ವಿಮಾನ ನಿಲ್ದಾಣ ಬಂದ್ ಆಗಿದ್ದು, ಇಂದಿನಿಂದ ಕಾರ್ಯಾರಂಭವಾಗಿದೆ.
ಆದರೆ ರೈಲು ನಿಲ್ದಾಣಗಳಲ್ಲಿ ಇನ್ನೂ ನೀರು ತುಂಬಿರುವ ಹಿನ್ನೆಲೆಯಲ್ಲಿ ಹಾಗೂ ರೈಲು ಮಾರ್ಗಗಳಲ್ಲಿ ಅವಾಂತರಗಳು ಸೃಷ್ಟಿಯಾಗಿರುವುದರಿಂದ 53 ರೈಲುಗಳನ್ನು ರದ್ದುಪಡಿಸಲಾಗಿದೆ. ಎಕ್ಸ್ ಪ್ರೆಸ್, ಮೇಲ್, ಪ್ಯಾಸೆಂಜರ್, ಈಸ್ಟ್ ಕೋಸ್ಟ್ ರೈಲ್ವೆ ಗಳನ್ನು ರದ್ದು ಮಾಡಲಾಗಿದೆ.
ಡಿಸೆಂಬರ್ 7ರವರೆಗೂ ಚನ್ನೈಗೆ ಈ ರೈಲುಗಳು ರದ್ದಾಗಿರಲಿವೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.