ಮನೆ, ಕಾರು, ಆಭರಣಗಳ ಹರಾಜಿನ ಬಗ್ಗೆ ನಾವು ಕೇಳಿರ್ತೇವೆ. ಆದ್ರೆ ಜಗತ್ತಿನಲ್ಲಿ ಕೆಲ ವಿಚಿತ್ರ ವಸ್ತುಗಳ ಹರಾಜು ನಡೆಯುತ್ತದೆ. ಅಮೆರಿಕಾದಲ್ಲಿ ಒಳ ಉಡುಪಿನ ಹರಾಜು ನಡೆಯಲಿದೆ. ಆಶ್ಚರ್ಯವಾದ್ರೂ ಇದು ಸತ್ಯ.
ಪ್ರಸಿದ್ಧ ಬಾಸ್ಕೆಟ್ಬಾಲ್ ಆಟಗಾರ ಮತ್ತು ಉದ್ಯಮಿ ಮೈಕೆಲ್ ಜೋರ್ಡಾನ್ ಅವರ ಒಳ ಉಡುಪುಗಳನ್ನು ಹರಾಜು ಮಾಡಲಾಗುತ್ತಿದೆ. ಜೋರ್ಡಾನ್ ಒಳ ಉಡುಪುಗಳ ಆರಂಭಿಕ ಬೆಲೆ 36 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ.
ಒಳ ಉಡುಪು, ಲೆಜೆಂಡ್ ಮೈಕೆಲ್ ಜೋರ್ಡಾನ್ ಗೆ ಸೇರಿದ್ದು ಎಂದು ವೆಬ್ಸೈಟ್ ಒಂದು ವರದಿ ಮಾಡಿದೆ. ಜೋರ್ಡಾನ್ ನ ಮಾಜಿ ಭದ್ರತಾ ಸಿಬ್ಬಂದಿ ಜಾನ್ ಮೈಕೆಲ್ ವೋಜ್ನಿಯಾಕ್ ಕುಟುಂಬದ ಸದಸ್ಯರು ಮಾರಾಟ ಮಾಡ್ತಿದ್ದಾರೆ. ಒಳ ಉಡುಪನ್ನು ನೋಡಿದ್ರೆ ಅದು ಬಳಸಿದ ಒಳ ಉಡುಪು ಎಂಬುದು ಸ್ಪಷ್ಟವಾಗುತ್ತದೆ ಎಂದು ವೆಬ್ಸೈಟ್ ವರದಿ ಮಾಡಿದೆ.
ಜೋರ್ಡಾನ್ನಿಂದ ವೋಜ್ನಿಯಾಕ್ಗೆ ಉಡುಗೊರೆಯಾಗಿ ನೀಡಿದ ಹಲವಾರು ವಸ್ತುಗಳಲ್ಲಿ ಒಳ ಉಡುಪು ಒಂದಾಗಿದೆ. ಹಿಂದೆ, ಬ್ಯಾಸ್ಕೆಟ್ಬಾಲ್ ಆಟಗಾರರು ಧರಿಸಿದ್ದ ಸೂಟ್ಗಳು, ಟೈಗಳು, ಬೆಲ್ಟ್ ಗಳು ಮತ್ತು ಜಾಕೆಟ್ಗಳನ್ನು ಸಹ ಹರಾಜು ಮಾಡಲಾಗಿದೆ. ಈ ಒಳ ಉಡುಪುಗಳ ಹರಾಜು ಸೆಪ್ಟೆಂಬರ್ 25 ರಂದು ನಡೆಯಲಿದೆ.