ಎನ್ಬಿಎ ದಂತಕಥೆ ಮೈಕೆಲ್ ಜೋರ್ಡಾನ್ ಧರಿಸಿ ಆಡಿದ್ದ ಸ್ನೀಕರ್ಸ್ ಜೋಡಿಯೊಂದು ಮಂಗಳವಾರ ನಡೆದ ಹರಜೊಂದರಲ್ಲಿ $2.2 ದಶಲಕ್ಷಕ್ಕೆ ಹರಾಜಾಗಿದೆ ಎಂದು ಸೋಥೆಬೇಸ್ ಘೋಷಿಸಿದೆ.
1998ರ ಎನ್ಬಿಎ ಫೈನಲ್ ಪಂದ್ಯದಲ್ಲಿ ’ಬ್ರೆಡ್ ಏರ್ ಜೋರ್ಡಾನ್ 13ಎಸ್’ ಎಂದು ಕರೆಯಲಾಗುವ ಈ ಜೋಡಿ ಶೂಗಳನ್ನು ಬ್ಯಾಸ್ಕೆಟ್ಬಾಲ್ ದಂತಕಥೆ ಧರಿಸಿದ್ದರು. ಆ ಪಂದ್ಯವನ್ನು ಗೆಲ್ಲುವ ಮೂಲಕ ತಮ್ಮ ಆರನೇ ಎನ್ಬಿಎ ಪ್ರಶಸ್ತಿ ಜಯಿಸಿದ್ದರು ಜೋರ್ಡಾನ್.
1998ರ ಜೂನ್ 5ರಂದು ನಡೆದ ಫೈನಲ್ ಪಂದ್ಯದಲ್ಲಿ ಷಿಕಾಗೋ ಬುಲ್ಸ್ ಪರ ಆಡಿದ್ದ ಜೋರ್ಡಾನ್, ಉತಾಹ್ ಜಾಜ಼್ ವಿರುದ್ಧ ತಮ್ಮ ತಂಡಕ್ಕೆ 93-88ರ ಅಂತರದಲ್ಲಿ ಗೆಲುವು ದಕ್ಕಿಸಿದ್ದರು.
ಈ ಮೂಲಕ ಕ್ರೀಡಾಪರಿಕರಗಳ ಸ್ಮರಣಿಕೆಗಳ ಹರಾಜಿನಲ್ಲಿ ಅತಿ ಹೆಚ್ಚು ಬೆಲೆ ಪಡೆದ ಅಥ್ಲೀಟ್ ಆಗಿದ್ದಾರೆ ಜೋರ್ಡಾನ್. ಸೆಪ್ಟೆಂಬರ್ 2021ರಲ್ಲಿ ತಮ್ಮದೇ ಸ್ನೀಕರ್ ಜೋಡಿಗೆ $1.5 ದಶಲಕ್ಷ ಪಡೆದುಕೊಂಡಿದ್ದರು ಜೋರ್ಡಾನ್. ಕಳೆದ ವರ್ಷದ ಹರಾಜೊಂದರಲ್ಲಿ ಜೋರ್ಡಾನ್ರ ಜೆರ್ಸಿಯೊಂದು $10.1 ದಶಲಕ್ಷಕ್ಕೆ ಹರಾಜಾಗಿತ್ತು.