ಮಾರಿಸ್ ಗ್ಯಾರೇಜ್ ಇಂಡಿಯಾದ ಮಧ್ಯಮ ಗಾತ್ರದ ಎಸ್‌ಯುವಿ ಆಸ್ಟರ್‌ಗೆ ಬುಕಿಂಗ್‌ನ ಎರಡನೇ ಹಂತವು ನವೆಂಬರ್ 1ರಂದು ಆರಂಭಗೊಳ್ಳಲಿದೆ.
2021ಕ್ಕೆ ಆಸ್ಟರ್‌ನ ಕೇವಲ 5,000 ಘಟಕಗಳನ್ನು ಭಾರತೀಯ ಮಾರುಕಟ್ಟೆಗೆ ಬಿಟ್ಟಿತ್ತು ಎಂಜಿ. ನವೆಂಬರ್ 1ರಿಂದ ತಲಾ 25,000 ರೂ.ಗಳಂತೆ ಆರಂಭಗೊಳ್ಳಲಿರುವ ಬುಕಿಂಗ್ ನಲ್ಲಿ ಮೀಸಲು ಮಾಡಲಾಗುವ ಕಾರುಗಳನ್ನು 2022ರ ಪ್ರಾರಂಭದಲ್ಲಿ ಡೆಲಿವರಿ ನೀಡಲಾಗುವುದು.
ತ್ರಿವರ್ಣದಲ್ಲಿ ಕಂಗೊಳಿಸಿದ ಪಾರಂಪರಿಕ ಸ್ಮಾರಕಗಳು: ಇದರ ಹಿಂದಿದೆ ಒಂದು ವಿಶೇಷತೆ
ಅಕ್ಟೋಬರ್ 11ರಂದು ಎಂಜಿ ಆಸ್ಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರಿನ ಎಕ್ಸ್‌ಶೋರೂಂ ಬೆಲೆಯು 9.78 ಲಕ್ಷ ರೂ.ಗಳಷ್ಟಿದೆ.
ವೈಯಕ್ತಿಯ ಎ1 ಸಹಾಯಕನ ಫೀಚರ್ ಹೊಂದಿರುವ ಭಾರತದ ಮೊದಲ ಎಸ್‌ಯುವಿ ಆದ ಎಂಜಿ ಆಸ್ಟರ್ ವಿಶಿಷ್ಟವಾದ ಆಟೋನಾಮಸ್ (ಲೆವೆಲ್ 2) ತಂತ್ರಜ್ಞಾನ ಹೊಂದಿದೆ. ಸ್ಟೈಲ್, ಸೂಪರ್, ಸ್ಮಾರ್ಟ್ ಹಾಗೂ ಶಾರ್ಪ್‌ಗಳ ಹೆಸರಿನಲ್ಲಿ ನಾಲ್ಕು ಅವತರಣಿಕೆಗಳಲ್ಲಿ ಆಸ್ಟರ್ ಅನ್ನು ಆಯ್ದುಕೊಳ್ಳಬಹುದಾಗಿದೆ. ಈ ಅವತರಣಿಕೆಗಳನ್ನು ಇಂಜಿನ್ ಹಾಗೂ ಟ್ರಾನ್ಸ್‌ಮಿಶನ್ ಆಧಾರದ ಮೇಲೆ ಒಂಬತ್ತು ಆಯ್ಕೆಗಳನ್ನಾಗಿ ವಿಂಗಡಿಸಲಾಗಿದೆ.
ಸನ್‌ರೂಫ್‌ಗೆ ದನಿ ಕಮಾಂಡ್ ಸೇರಿ 80+ ಆಕರ್ಷಕ ಫೀಚರ್‌ಗಳನ್ನು ಹೊಂದಿರುವ ಆಸ್ಟರ್‌ನಲ್ಲಿ ಓಟಿಎ ಜೊತೆಗೆ ಸ್ಮಾರ್ಟ್ ಕನೆಕ್ಟಿವಿಟಿ ಇದ್ದು, ಎಸಿ ನಿಯಂತ್ರಣ ಹಾಗೂ ಬ್ಲೂಟೂತ್ ಚಾಲಿತ ರಿಮೋಟ್ ಲಾಕ್/ಅನ್‌ಲಾಕ್ ಮಾಡುವ ಆಯ್ಕೆಗಳಿವೆ. 10.1 ಇಂಚಿನ ದೊಡ್ಡ ಗಾತ್ರದ ಸ್ಕ್ರೀನ್ ಈ ಕಾರಿನ ಕೇಂದ್ರ ಆಕರ್ಷಣೆಯಾಗಿದೆ.
ವಿಮಾನ ಚಲಾಯಿಸಿದ 84 ವರ್ಷದ ವೃದ್ದೆ….!
ದೇಶದಲ್ಲಿ ಹೆಕ್ಟರ್/ಹೆಕ್ಟರ್ ಪ್ಲಸ್ ಮೂಲಕ ಬ್ರಾಂಡ್ ಎಂಟ್ರಿ ಕೊಟ್ಟಿರುವ ಎಂಜಿ, ಇದಾದ ಬಳಿಕ ಎಂಜಿ ಜ಼ಡ್‌ಎಸ್ ಇವಿ ಹಾಗೂ ಗ್ಲಾಸ್ಟರ್‌ಗಳನ್ನು ಬಿಡುಗಡೆ ಮಾಡಿದೆ. ಕಂಪನಿಯ ಮೊದಲ ಮಧ್ಯಮ ಎಸ್‌ಯುವಿಯಾದ ಆಸ್ಟರ್ ಅನ್ನು ದೇಶದ ಮಧ್ಯಮ ವರ್ಗದ ಮಂದಿಯ ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದೆ.