ತಲೆಯಲ್ಲಿ ಕೂದಲು ಇರದವರು ಅಯ್ಯೋ ತನ್ನ ತಲೆ ಬೋಳಾಗಿದೆ ಏನು ಮಾಡುವುದು ಅಂತಾ ಚಿಂತೆಯಲ್ಲಿರುತ್ತಾರೆ. ಕೆಲವರು ತಲೆಗೂದಲಿನ ಕಸಿ ಶಸ್ತ್ರಚಿಕಿತ್ಸೆಗೂ ಒಳಗಾಗುತ್ತಾರೆ. ಇನ್ನೂ ಕೆಲವರು ತಲೆಗೂದಲಿಗೆ ಭಿನ್ನ-ವಿಭಿನ್ನವಾದ ಬಣ್ಣ ಹಚ್ಚುತ್ತಾರೆ. ಆದರೆ, ಇಲ್ಲೊಬ್ಬ ವಿಚಿತ್ರ ಆಸಾಮಿ ತಲೆಗೂದಲಿಗೆ ಚಿನ್ನದ ಸರಗಳನ್ನು ಅಳವಡಿಸಿಕೊಂಡಿದ್ದಾನೆ.
ಹೌದು, ಮೆಕ್ಸಿಕನ್ ಮೂಲದ ರ್ಯಾಪರ್ ಡಾನ್ ಸುರ್ ಎಂಬಾತ ಏನಾದರೂ ವಿಭಿನ್ನವಾಗಿ ಇರಬೇಕು ಅನ್ನೋ ಆಸೆಯಿರುತ್ತೆ. ಇದಕ್ಕಾಗಿ ತನ್ನ ತಲೆಗೂದಲ ಬದಲಾಗಿ ಚಿನ್ನದ ಸರಗಳನ್ನು ಹೊಂದಲು ಬಯಸಿದ್ದಾನೆ. ಶಸ್ತ್ರಚಿಕಿತ್ಸೆಯ ಮುಖಾಂತರ ಚಿನ್ನದ ಸರಗಳನ್ನು ತನ್ನ ತಲೆಯ ಮೇಲೆ ನೇತು ಹಾಕಿಕೊಂಡಿದ್ದಾನೆ. ಚಿನ್ನದ ಸರಗಳನ್ನು ತನ್ನ ಕೂದಲಿನಲ್ಲಿ ಹೊಂದಿರುವ ಮೊದಲ ರ್ಯಾಪರ್ ಎಂದು ಹೇಳಲಾಗಿದೆ.
ಅಮೆರಿಕ ಅಧ್ಯಕ್ಷರ ವಿಮಾನವೂ ಭಯೋತ್ಪಾದಕರ ಹಿಟ್ಲಿಸ್ಟ್ನಲ್ಲಿತ್ತು…..!
2021ರ ಏಪ್ರಿಲ್ ನಲ್ಲಿ ಸುರ್ ಕೂದಲು ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ತನ್ನ ಚಿನ್ನದ ಸರಗಳು ಹೊಂದಿರುವ ತಲೆಯ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.