ವಿವಿಧ ಕಂಪನಿಗಳ ಐಷಾರಾಮಿ ಕಾರುಗಳನ್ನು ಖರೀದಿ ಮಾಡುತ್ತಾ, ಅವುಗಳಿಗಾಗಿಯೇ ಗ್ಯಾರೇಜ್ ನಿರ್ಮಿಸುವುದು ಹಲವು ಧನಿಕರ ಹವ್ಯಾಸವಾಗಿದೆ. ಆದರೆ 1,200 ಕಾರುಗಳನ್ನು ಹೊಂದಿರುವವನು ಮಾತ್ರ ಕಾರುಗಳಿಗೆ ಗ್ಯಾರೇಜ್ ಬದಲು ಸಣ್ಣ ಕೊಠಡಿ ಮಾಡಿದ್ದಾನೆ…!
ಹೌದು, ಇವು ಆಟಿಕೆ ಕಾರುಗಳು. ಮೆಕ್ಸಿಕೊದ ಜಾರ್ಗಿ ಅರಿಯಾಸ್ ಎಂಬಾತ 2006ರಲ್ಲಿ ತೆರೆಕಂಡ ’ಕಾರ್ಸ್’ ಹೆಸರಿನ ಅನಿಮೇಷನ್ ಸಿನಿಮಾದಿಂದ ಸ್ಫೂರ್ತಿಗೊಂಡು, ಅದರಲ್ಲಿ ಬರುವ ಎಲ್ಲ ಮಾತನಾಡುವ ಕಾರುಗಳ ಸಂಗ್ರಹ ಮಾಡಲು ಮುಂದಾಗಿದ್ದಾರೆ.
ʼಗೋವಾʼ ಹೋಗುವ ಪ್ಲಾನ್ ಮಾಡಿದ್ರೆ ಈ ಸುದ್ದಿ ಓದಿ
ಅದರಂತೆ ಒಟ್ಟು 15 ವರ್ಷಗಳವರೆಗೆ ಆಟಿಕೆ ಕಾರುಗಳನ್ನು ಹುಡುಕಿ, ಸಂಗ್ರಹಿಸಿರುವ ಅವರ ಬಳಿ ಸದ್ಯ 1200 ’ಕಾರ್ಸ್ ಮೆಮೊರಾಬಿಲಿಯಾ’ ಕಲೆಕ್ಷ ನ್ ಇದೆ. ಮ್ಯಾಕ್‌ಕ್ವೀನ್, ಸ್ಯಾಲಿ, ಮತೇರ್, ಚಿಕ್ ಹಿಕ್ಸ್ ಸೇರಿದಂತೆ ಬಗೆಬಗೆಯ ಆಟಿಕೆ ಕಾರುಗಳನ್ನು ಜಾರ್ಗಿ ಹೊಂದಿದ್ದಾರೆ. 2022ರ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಜಾರ್ಗಿ ಹೆಸರಲ್ಲಿ ದಾಖಲಾಗಿದೆ.
ಅವರ ಮುಂದಿನ ಗುರಿ ಏನೆಂದರೆ, ಜಗತ್ತಿನಲ್ಲೇ ಯಾರ ಬಳಿಯೂ ಇರದಷ್ಟು ಸಂಖ್ಯೆಯಲ್ಲಿ ಮಿನಿ ಕಾರ್ಸ್‌ಗಳ ಸಂಗ್ರಹ ಮಾಡುವುದಾಗಿದೆ. ಅವರಿಗೆ ʼಆಲ್ ದಿ ಬೆಸ್ಟ್ʼ ಹೇಳೋಣವೇ?