ಬೆಂಗಳೂರು: ಮೆಟ್ರೋ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯೂಆರ್ ಕೋಡ್ ವ್ಯವಸ್ಥೆ ತರಲು BMRCL ಮುಂದಾಗಿದೆ.
ನಮ್ಮ ಮೆಟ್ರೋದಲ್ಲಿ ಈಗಾಗಲೇ ಕ್ಯೂಆರ್ ಕೋಡ್ ವ್ಯವಸ್ಥೆ ಇದೆ. ಆದರೆ, ಅಸ್ತಿತ್ವದಲ್ಲಿರುವ ಎಲ್ಲಾ ಅಪ್ಲಿಕೇಶನ್ ಗಳಿಗೆ ಕ್ಯೂಆರ್ ಕೋಡ್ ಹೊಂದಿಕೆ ಆಗುವುದಿಲ್ಲ. ಬದಲಾಗಿ ಕೆಲವು ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳೊಂದಿಗೆ ಮಾತ್ರ ಬಳಕೆಯಾಗುತ್ತಿವೆ. ಹೀಗಾಗಿ ಟಿಕೆಟ್, ಟೋಕನ್ ರಹಿತ ಚಾಲನೆಗೆ ಅವಕಾಶ ನೀಡಲು ಈ ಕ್ಯೂಆರ್ ಕೋಡ್ ವ್ಯವಸ್ಥೆ ವಿಸ್ತರಿಸಲು ಬಿಎಮ್ಆರ್‌ಸಿಎಲ್ ನಿರ್ಧರಿಸಿದೆ.
ಭಾರತ್ ಬಿಲ್ ಪೇ ಸಿಸ್ಟಮ್ ಮಾದರಿಯ ಅಪ್ಲಿಕೇಶನ್ ವಿನ್ಯಾಸಕ್ಕೆ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು, ಮೆಟ್ರೋ ಪ್ರಯಾಣಿಕರು ಈ ಮೂಲಕ ಮೆಟ್ರೋ ಟಿಕೆಟ್ ಗಳನ್ನು ಖರೀದಿಸಬಹುದು. ಅಲ್ಲದೇ ತಮ್ಮ ಸ್ಮಾರ್ಟ್ ಕಾರ್ಡ್ ಗಳನ್ನು ರಿಚಾರ್ಜ್ ಮಾಡಬಹುದು. ಆಟೋ ರಿಕ್ಷಾ ಮತ್ತು ಕ್ಯಾಬ್ ಗಳನ್ನು ಕೂಡ ಬುಕ್ ಮಾಡಬಹುದಾಗಿದೆ ಎನ್ನಲಾಗಿದೆ.