ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೀಘ್ರವೇ ಪರಿಷ್ಕರಣೆ ಮಾಡಲಿದ್ದು, ಕನಿಷ್ಠ ದರ 15 ರೂಪಾಯಿ, ಗರಿಷ್ಟ ದರ 70 ರೂ. ಆಗುವ ಸಾಧ್ಯತೆ ಇದೆ.
2011ರಲ್ಲಿ ನಮ್ಮ ಮೆಟ್ರೋ ಸೇವೆ ಆರಂಭಿಸಿದ್ದು 2017ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ನಮ್ಮ ಬೆಂಗಳೂರು ಮೆಟ್ರೋ ರೈಲು ನಿಗಮ ಎರಡನೇ ಬಾರಿಗೆ ದರ ಪರಿಷ್ಕರಣೆಗೆ ರಚಿಸಿದ್ದ ನಿಗದಿ ಸಮಿತಿ ಅಕ್ಟೋಬರ್ 28 ರ ವರೆಗೆ ಸಾರ್ವಜನಿಕರಿಂದ ಸಲಹೆ, ಸೂಚನೆ, ಆಕ್ಷೇಪಣೆ ಪಡೆದುಕೊಂಡಿದೆ.
ಮೆಟ್ರೋ ರೈಲ್ವೆ ಕಾಯಿದೆಯಡಿಯಲ್ಲಿ ಕೇಂದ್ರದಿಂದ ರಚಿಸಿದ ಬಿಎಮ್ಆರ್‌ಸಿಎಲ್ ನ ಮೊದಲ ದರ ನಿಗದಿ ಸಮಿತಿ ಇದಾಗಿದೆ. ಸದ್ಯ ಕನಿಷ್ಠ ದರ 10 ರೂಪಾಯಿ, ಗರಿಷ್ಠ ದರ 60 ರೂಪಾಯಿ ಇದೆ. ಸ್ಮಾರ್ಟ್ ಕಾರ್ಡ್, ಕ್ಯೂಆರ್ ಕೋಡ್ ಟಿಕೆಟ್ ಬಳಸುವವರಿಗೆ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ಮೆಟ್ರೋ ರೈಲುಗಳ ಕಾರ್ಯಾಚರಣೆ, ನಿರ್ವಹಣೆ, ಸಿಬ್ಬಂದಿ ವೇತನ ಸೇರಿ ವಿವಿಧ ರೀತಿಯ ವೆಚ್ಚ ಹೆಚ್ಚಾಗಿದೆ. 7 ವರ್ಷಗಳಿಂದ ದರ ಪರಿಷ್ಕರಣೆಯಾಗಿಲ್ಲ. ಹೀಗಾಗಿ ಕನಿಷ್ಠ ದರ 15 ರೂಪಾಯಿಗೆ ಏರಿಕೆ ಮಾಡುವ ಸಾಧ್ಯತೆ ಇದೆ.