ಮುಂಬೈ : ಮುಂಬೈನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದಿದ್ದು, ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ.
ವಡಾಲಾ ಕಡೆಗೆ ನಡೆಯುತ್ತಿರುವ ಮೆಟ್ರೋ ಲೈನ್ 4 ನಿರ್ಮಾಣದ ಭಾಗವಾದ 20 ಅಡಿ ಕಾಂಕ್ರೀಟ್ ಪಿಲ್ಲರ್ ಸುಮನ್ ನಗರ ಸೊಸೈಟಿಯಲ್ಲಿ ವಸತಿ ಪ್ರದೇಶದ ಮೇಲೆ ಕುಸಿದಿದೆ.
ಗುರುವಾರ ರಾತ್ರಿ 9:30 ರ ಸುಮಾರಿಗೆ ಈ ಘಟನೆ ನಡೆದಿದ್ದು, ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಮುಂಬಾದ ಪ್ರಮುಖ ಸಂಚಾರ ಮಾರ್ಗವಾದ ಸಿಯಾನ್-ಟ್ರಾಂಬೆ ರಸ್ತೆಗೆ ಹೋಗುವ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ. ಕುಸಿತವು ನಡೆಯುತ್ತಿರುವ ಮೆಟ್ರೋ ಕಾಮಗಾರಿಯ ಸ್ಥಿರತೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
#WATCH | Mumbai, Maharashtra: An under-construction metro pillar collapsed in Chembur, Suman Nagar. No injury has been reported so far. More details awaited. pic.twitter.com/4cjx738U9z
— ANI (@ANI) January 30, 2025