ಮೆಥುಸೆಲಾ ಎಂಬ ನಾಲ್ಕು ಅಡಿ ಉದ್ದದ ಆಸ್ಟ್ರೇಲಿಯಾದ ಲಂಗ್ ಮೀನು, 90 ವರ್ಷ ವಯಸ್ಸಿನ ಮತ್ತು ಪ್ರಸ್ತುತ ಅಕ್ವೇರಿಯಂನಲ್ಲಿ ವಾಸಿಸುತ್ತಿರುವ ವಿಶ್ವದ ಅತ್ಯಂತ ಹಳೆಯದು ಎಂದು ನಂಬಲಾಗಿದೆ.
ಕ್ಯಾಲಿಫೋರ್ನಿಯಾ ಅಕಾಡೆಮಿ ಆಫ್ ಸೈನ್ಸಸ್‌ನ ಜೀವಶಾಸ್ತ್ರಜ್ಞರ ಪ್ರಕಾರ 18 ಕೆಜಿ ತೂಕದ ಮೀನನ್ನು 1938 ರಲ್ಲಿ ಆಸ್ಟ್ರೇಲಿಯಾದಿಂದ ಸ್ಯಾನ್ ಫ್ರಾನ್ಸಿಸ್ಕೋ ವಸ್ತು ಸಂಗ್ರಹಾಲಯಕ್ಕೆ ತರಲಾಯಿತು. ಮೆಥುಸೆಲಾ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕ್ಯಾಲಿಫೋರ್ನಿಯಾ ಅಕಾಡೆಮಿ ಆಫ್ ಸೈನ್ಸಸ್‌ನ ಸ್ಟೇನ್‌ಹಾರ್ಟ್ ಅಕ್ವೇರಿಯಂನಲ್ಲಿ ವಾಸಿಸುತ್ತಿದೆ.
ಮೊಬೈಲ್ ಬಳಕೆದಾರರಿಗೆ ಮುಖ್ಯ ಮಾಹಿತಿ: TRAI ಹೊಸ ಮಾರ್ಗಸೂಚಿ, ಕನಿಷ್ಟ 30 ದಿನಗಳ ಮಾನ್ಯತೆಯ ರೀಚಾರ್ಜ್ ಆಯ್ಕೆಗೆ ಅವಕಾಶ
ಮೀನಿನ ಹೆಸರು ಬೈಬಲ್‌ನ ಮೆಥುಸೆಲಾ ಎಂಬ ಹೆಸರಿನಿಂದ ಬಂದಿದೆ. ನೋಹನ ಅಜ್ಜನಾದ ಮೆಥುಸೆಲಾ 969 ವರ್ಷಗಳವರೆಗೆ ಬದುಕಿದ್ದರು ಎಂದು ಹೇಳಲಾಗುತ್ತದೆ.
ಮೀನಿನ ಮೇಲೆ ವರ್ಷಗಳ ಕಾಲ ಅಧ್ಯಯನ ಮಾಡಿದ ಜೀವಶಾಸ್ತ್ರಜ್ಞರು ಅದು 90 ವರ್ಷಗಳಷ್ಟು ಹಳೆಯದು ಎಂದು ಹೇಳಿದ್ದಾರೆ. ದುರದೃಷ್ಟವಶಾತ್, ಮೆಥುಸೆಲಾಗೆ ಯಾವುದೇ ಜೀವಂತ ಗೆಳೆಯರಿಲ್ಲ.
ಎಪಿ ವರದಿಯ ಪ್ರಕಾರ, ಮೆಥುಸೆಲಾ 95 ವರ್ಷ ವಯಸ್ಸಿನವರೆಗೆ ಶೆಡ್ ಅಕ್ವೇರಿಯಂನಲ್ಲಿ ವಾಸಿಸುತ್ತಿದ್ದ ಆಸ್ಟ್ರೇಲಿಯಾದ ಶ್ವಾಸಕೋಶದ ಮೀನು ’ಗ್ರಾಂಡ್ ಡ್ಯಾಡ್’ ನಿಂದ ಅತ್ಯಂತ ಹಳೆಯ ಜೀವಂತ ಅಕ್ವೇರಿಯಂ ಮೀನು ಎಂಬ ಶೀರ್ಷಿಕೆಯನ್ನು ಪಡೆದಿರಬಹುದು. ಗ್ರಾಂಡ್ ಡ್ಯಾಡ್ 2017 ರಲ್ಲಿ ಸತ್ತುಹೋಯಿತು.
ಆಸ್ಟ್ರೇಲಿಯನ್ ಲಂಗ್ ಮೀನುಗಳು, ಮೀನು ಮತ್ತು ಉಭಯಚರಗಳ ನಡುವಿನ ವಿಕಸನೀಯ ಕೊಂಡಿ ಎಂದು ನಂಬಲಾಗಿದೆ ಏಕೆಂದರೆ ಅವುಗಳು ಶ್ವಾಸಕೋಶಗಳು ಮತ್ತು ಕಿವಿರುಗಳನ್ನು ಹೊಂದಿರುವ ಪ್ರಾಚೀನ ಜಾತಿಗಳಾಗಿವೆ.
ಕ್ಯಾಲಿಫೋರ್ನಿಯಾ ಅಕಾಡೆಮಿ ಆಫ್ ಸೈನ್ಸಸ್‌ನ ಜೀವಶಾಸ್ತ್ರಜ್ಞರು ಮೆಥುಸೆಲಾದ ಲಿಂಗ ಬಗ್ಗೆ ಸ್ಪಷ್ಟನೆ ಇಲ್ಲದಿದ್ದರೂ ಇದು ಹೆಣ್ಣು ಎಂದು ನಂಬುತ್ತಾರೆ. ರಿಸ್ಕ್ ತೆಗೆದುಕೊಂಡು ಮೀನಿನ ರಕ್ತ ಪಡೆಯದೆ ಅದರ ಲಿಂಗವನ್ನು ಸಂಪೂರ್ಣವಾಗಿ ನಿರ್ಧರಿಸಲಾಗುವುದಿಲ್ಲ ಎಂದು ಜೀವಶಾಸ್ತ್ರಜ್ಞರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅಕಾಡೆಮಿಯು ಈಗ ಮೆಥುಸೆಲಾಳ ಸಣ್ಣ ರೆಕ್ಕೆಯನ್ನು ಆಸ್ಟ್ರೇಲಿಯಾದ ಸಂಶೋಧಕರಿಗೆ ಕಳುಹಿಸಿದರೆ ಆಕೆಯ ಲಿಂಗ ಮತ್ತು ನಿಖರವಾದ ವಯಸ್ಸನ್ನು ಖಚಿತಪಡಿಸಲು ಸಾಧ್ಯವಾಗುತ್ತದೆ ಎಂಬ ಭರವಸೆ ಹೊಂದಿದ್ದಾರೆ.
ಕ್ಯಾಲಿಫೋರ್ನಿಯಾ ಅಕಾಡೆಮಿ ಆಫ್ ಸೈನ್ಸಸ್‌ನ ಹಿರಿಯ ಜೀವಶಾಸ್ತ್ರಜ್ಞ ಅಲನ್ ಜಾನ್, ಮೆಥುಸೆಲಾ ಸೌಮ್ಯ ವ್ಯಕ್ತಿತ್ವವನ್ನು ಹೊಂದಿದ್ದಾಳೆ ಮತ್ತು ಅವಳ ಹೊಟ್ಟೆ ಮತ್ತು ಬೆನ್ನಿನ ಮೇಲೆ ಉಜ್ಜಲು ಇಷ್ಟಪಡುತ್ತಾಳೆ ಎಂದಿದ್ದಾರೆ.
“ನಾನು ನನ್ನ ಸ್ವಯಂಸೇವಕರಿಗೆ ಹೇಳುತ್ತೇನೆ, ಅವಳು ನೀರೊಳಗಿನ ನಾಯಿಮರಿ ಎಂದು ಭಾವಿಸಿ, ತುಂಬಾ ಸೌಮ್ಯ. ಆದರೆ ಭಯಭೀತಳಾದರೆ ಸಹಜವಾಗಿಯೇ ಅವಳಲ್ಲಿ ಹಠಾತ್ ಶಕ್ತಿಯಿಂದ ಹೊರಬರುತ್ತದೆ. ಆದರೆ ಅವಳು ಬಹುತೇಕ ಶಾಂತವಾಗಿದ್ದಾಳೆ,”ಎಂದು ಜಾನ್ ಹೇಳಿದರು.
ಆಕೆಯ ಆಹಾರ ಪದ್ಧತಿಗೆ ಸಂಬಂಧಿಸಿದಂತೆ ಮಾತನಾಡಿದ ಜಾನ್, ಅವಳು ತಾಜಾ ಅಂಜೂರದ ಹಣ್ಣುಗಳಿಗೆ ಮಾತ್ರ ಆದ್ಯತೆ ನೀಡುತ್ತಾಳೆ ಮತ್ತು ಶೀತಸಂಗ್ರಹದ ಹಣ್ಣುಗಳನ್ನು ತಿನ್ನುವುದಿಲ್ಲ ಎಂದಿದ್ದಾರೆ.
ಸಾವಯವ ಬ್ಲ್ಯಾಕ್‌ಬೆರಿಗಳು, ದ್ರಾಕ್ಷಿಗಳು, ಕ್ಲಾಮ್‌ಗಳು, ಸೀಗಡಿಗಳು ಮತ್ತು ಎರೆಹುಳುಗಳಂತಹ ಇತರ ವಸ್ತುಗಳನ್ನು ಅವಳ ದೈನಂದಿನ ಆಹಾರದಲ್ಲಿ ಭಾಗವಾಗಿಡಲಾಗಿದೆ ಎಂದು ಮ್ಯೂಸಿಯಂನ ಸ್ಟೇನ್‌ಹಾರ್ಟ್ ಅಕ್ವೇರಿಯಂನ ಮೇಲ್ವಿಚಾರಕ ಚಾರ್ಲ್ಸ್ ಡೆಲ್ಬೀಕ್ ಹೇಳಿದರು.