ಬೇಕಾಗುವ ಪದಾರ್ಥಗಳು: ಮೈದಾ ಹಿಟ್ಟು 2 ಕಪ್, ಬೆಲ್ಲ 2 ಅಚ್ಚು, ಕೊಬ್ಬರಿ ಎಣ್ಣೆ 1 ಕಪ್, ಹಲಸಿನಕಾಯಿ ಬೀಜ 1 ಕಪ್, ತೆಂಗಿನತುರಿ 1 ಕಪ್, ಅರಿಶಿನ ಪುಡಿ ಚಿಟಿಕೆ, ಉಪ್ಪು ಚಿಟಿಕೆ.
ಮಾಡುವ ವಿಧಾನ: ಮೊದಲು ಮೈದಾ ಹಿಟ್ಟಿಗೆ ಅರಿಶಿನ ಪುಡಿ, ಚಿಟಿಕೆ ಉಪ್ಪು ಸೇರಿಸಿ ನೀರು ಹಾಕಿ ಕಲೆಸಿ ಚೆನ್ನಾಗಿ ನಾದಿ ಕಣಕ ತಯಾರಿಸಿಕೊಳ್ಳಬೇಕು.
ನಂತರ ಹಲಸಿನ ಬೀಜದ ಸಿಪ್ಪೆ ತೆಗೆದು ಬೇಯಿಸಿ ಬೆಲ್ಲ ಹಾಗೂ ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿ ಊರಣ ತಯಾರಿಸಿ, ಉಂಡೆಗಳನ್ನಾಗಿ ಮಾಡಿ ಕಣಕದಲ್ಲಿ ತುಂಬಿ ಹೋಳಿಗೆ ಲಟ್ಟಿಸಿ, ಕಾದ ತವಾದಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ ಬೇಯಿಸಿದರೆ ರುಚಿಕರವಾದ ಹಲಸಿನ ಬೀಜದ ಹೋಳಿಗೆ ಸವಿಯಲು ಸಿಧ್ಧ.