ಬೆಂಗಳೂರು: ಮುಂದಿನ ಮೂರು ತಿಂಗಳ ಕಾಲ ರಾಜ್ಯದಲ್ಲಿ ಆಗಾಗ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೇಸಿಗೆಯ ಬಿಸಿಲಿನ ತಾಪಕ್ಕೆ ತಂಪೆರೆಯುವ ರೀತಿ ವಾಡಿಕೆಗಿಂತ ತುಸು ಹೆಚ್ಚಿನ ಮಳೆಯಾಗಲಿದೆ. ಜನವರಿ, ಫೆಬ್ರವರಿ, ಮಾರ್ಚ್ ಅವಧಿಯಲ್ಲಿ 15.4 ಮಿಲಿಮೀಟರ್ ನಷ್ಟು ವಾಡಿಕೆ ಮಳೆಯಾಗುತ್ತದೆ. ಈ ಪ್ರಮಾಣ ಮತ್ತು ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದ್ದು, ರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ನೀರಿನ ಬವಣೆ ಕಡಿಮೆ ಮಾಡುತ್ತದೆ. ಅಲ್ಲದೇ, ಬೇಸಿಗೆಯಲ್ಲಿ ಬಿಸಿಲಿನ ತಾಪ ಕಡಿಮೆ ಮಾಡಲಿದೆ ಎಂದು ಹೇಳಲಾಗಿದೆ.
ಜನವರಿ, ಫೆಬ್ರವರಿ, ಮಾರ್ಚ್ ನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಂಭವ ಇದೆ ಎಂದು ಹೇಳಿರುವುದರಿಂದ ಹಿಂಗಾರು, ಮುಂಗಾರು ಮಳೆ ಕೊರತೆಯಿಂದ ಕಂಗಾಳದ ರೈತರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.