ನವದೆಹಲಿ: ಉತ್ತಮ ಮುಂಗಾರು ಮಳೆಗೆ ಪೂರಕ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಸಕ್ತ ವರ್ಷದ ಮುಂಗಾರಿನ ಕುರಿತಾಗಿ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದ್ದು, ಜೂನ್ ಮೊದಲ ವಾರದಿಂದ ಆರಂಭವಾಗುವ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಇರಲಿದೆ ಎಂದು ಹೇಳಲಾಗಿದೆ.
ಭಾರತೀಯ ಹವಾಮಾನ ಸಂಸ್ಥೆಯ ಮುಖ್ಯಸ್ಥ ಮೃತ್ಯುಂಜಯ ಮಹಾಪಾತ್ರ ಈ ಬಗ್ಗೆ ಮಾಹಿತಿ ನೀಡಿದ್ದು, ಮುಂಗಾರು ಮಾರುತಗಳ ಮೇಲೆ ಅಡ್ಡ ಪರಿಣಾಮ ಬೀರಬಹುದಾದ ಎಲ್ ನೀನೋ ಪರಿಣಾಮ ದೂರವಾಗುತ್ತಿದೆ. ಯುರೇಷ್ಯಾ ಭಾಗದಲ್ಲಿ ಹಿಮ ಆವರಿಸಿಕೊಳ್ಳುವ ಪ್ರಮಾಣ ಕಡಿಮೆಯಾಗಿದೆ. ಇದು ಸಾಮಾನ್ಯ ಮುಂಗಾರು ಮಳೆ ಸುರಿಯುವ ಮುನ್ಸೂಚನೆಯಾಗಿದೆ. ಪ್ರಸಕ್ತ ಇರುವ ಎಲ್ ನೀನೋ ಪರಿಣಾಮ ಜೂನ್ ವೇಳೆಗೆ ತಟಸ್ಥವಾಗಲಿದ್ದು, ಭಾರತದ ಮುಂಗಾರು ಮಾರುತಗಳಿಗೆ ಉತ್ತಮವಾಗಲಿದೆ. ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಇರುವ ಕುರಿತಾದ ಸುಳಿವು ದೊರೆತಿದೆ ಎಂದು ಹೇಳಲಾಗಿದೆ.