ಮೊನ್ನೆ ಹೊಸ ವರ್ಷಾಚರಣೆಯಂದು ಅಮೆರಿಕದ ಪಿಟ್ಸ್‌ಬರ್ಗ್ ಹೊರವಲಯದಲ್ಲಿ ದೊಡ್ಡ ಸ್ಫೋಟದ ಸದ್ದು ಕೇಳಿಬಂದಿತ್ತು. ಜನರು ಗಾಬರಿಗೊಂಡು, ಆಕಾಶ-ಭೂಮಿಯನ್ನು ನೋಡಿದ್ದರು. ಎಲ್ಲಿಯೂ ಯಾವುದೇ ದುರಂತ ಸಂಭವಿಸಿದ ಕುರುಹು ಇರಲಿಲ್ಲ.
ಈ ರಹಸ್ಯವನ್ನು ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ’ನಾಸಾ’ ಭೇದಿಸಿದೆ. ಸುಮಾರು 30 ಟನ್ ಸ್ಫೋಟಕ ವಸ್ತು (ಟಿಎನ್‌ಟಿ)ವಿಗೆ ಬೆಂಕಿ ಹಚ್ಚಿದರೆ ಸಿಡಿಯುವಷ್ಟು ಭೀಕರವಾಗಿ, ತೀವ್ರವಾಗಿ ಬಾಹ್ಯಾಕಾಶದಲ್ಲಿ ಉಲ್ಕೆಯೊಂದು ಸ್ಫೋಟಗೊಂಡಿದೆ.
ಹೌದು, ಈ ಉಲ್ಕೆಯು ಗಂಟೆಗೆ 72,420 ಕಿ.ಮೀ ವೇಗದಲ್ಲಿ ಸಂಚರಿಸುತ್ತಿತ್ತು. ಚಂದ್ರನಿಗಿಂತ 100 ಪಟ್ಟು ಹೆಚ್ಚು ಪ್ರಕಾಶಮಾನವಾಗಿತ್ತು ಎಂದು ನಾಸಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
BIG NEWS: ಕೋವಿಡ್ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮೈಲುಗಲ್ಲು ಸೃಷ್ಠಿಸಿದ ಕರ್ನಾಟಕ
ಪಿಟ್ಸ್‌ಬರ್ಗ್ ನಗರದ ಹತ್ತಿರವಿರುವ ಇನ್‌ಫ್ರಾಸೌಂಡ್ ಕೇಂದ್ರದಲ್ಲಿ ತೀವ್ರ ಸ್ಫೋಟದ ಮಾಹಿತಿ ದಾಖಲಾಗಿದೆ. ಸೆ.17ರಂದು ಕೂಡ ಪಶ್ಚಿಮ ವರ್ಜಿನಿಯಾದ ಹಾರ್ಡ್ ಕೌಂಟಿಯಲ್ಲಿ ಇಂಥದ್ದೇ ದೊಡ್ಡ ಸ್ಫೋಟದ ಸದ್ದು ಕೇಳಿಬಂದಿತ್ತು. ಆ ವೇಳೆ ಜನರು ಭೂಕಂಪನ ಎಂದು ಭಾವಿಸಿದ್ದರು. ಕೆಲ ಸಮಯದ ಬಳಿಕ ಸುತ್ತಲಿನ ಪ್ರದೇಶ ಗಮನಿಸಿದಾಗ ಎಲ್ಲಿಯೂ ಮನೆಗಳಿಗೆ ಅಥವಾ ಸ್ವತ್ತುಗಳಿಗೆ ಹಾನಿ ಉಂಟಾಗಿರಲಿಲ್ಲ. ಅದು ಭೂಮಿಯ ಮೇಲೆ ಸಂಭವಿಸಿದ ಘಟನೆಯಲ್ಲ ಎಂದು ಸಿಸಿಮೊಗ್ರಾಫ್ ಹೇಳಿತ್ತು.
ಆಗ ಕೂಡ ನಾಸಾ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಭಾರಿ ವೈಪರೀತ್ಯ ಉಂಟಾಗಿರುವ ಸುಳಿವು ಕೊಟ್ಟಿದ್ದರು. ಬಾಹ್ಯಾಕಾಶದಲ್ಲಿ ಪ್ರಾಕೃತಿಕವಾಗಿ ನಿರ್ಮಾಣಗೊಂಡ ಬಂಡೆಗಳು ಒಂದಕ್ಕೊಂದು ಅಪ್ಪಳಿಸಿ, ಸಣ್ಣ ಚೂರುಗಳಾಗಿ ತೇಲುತ್ತಿರುತ್ತವೆ. ಇವು ಭೂಮಿಯಂತಹ ಗ್ರಹದ ಗುರುತ್ವಾಕರ್ಷಣೆಗೆ ಒಳಪಟ್ಟಾಗ ವೇಗ ಪಡೆದು ಭೂಮಿಗೆ ಅಪ್ಪಳಿಸುವಂತೆ ದೌಡಾಯಿಸುತ್ತವೆ. ರಾಕೆಟ್ ಅಥವಾ ಕ್ಷಿಪಣಿಯೊಂದು ಭೂಮಿಗೆ ದಾಳಿ ನಡೆಸುತ್ತಿರುವಂತೆ ಬಾಹ್ಯಾಕಾಶವನ್ನು ವೀಕ್ಷಿಸಿದಾಗ ಗೋಚರಿಸುತ್ತವೆ.