
ವಿಶೇಷವಾಗಿ ಭಾರತದ ದಕ್ಷಿಣ ಭಾಗದಲ್ಲಿ ಅಪ್ಲಿಕೇಶನ್ನ ಲೋಗೋವನ್ನು ಕೇಂದ್ರೀಕರಿಸಲಾಗಿದೆ. ಏಕೆಂದರೆ ಥ್ರೆಡ್ ಲೋಗೋ ವನ್ನ ಅನೇಕ ನೆಟಿಜನ್ಗಳು ದ್ರಾವಿಡ ಭಾಷೆಗಳಾದ ತಮಿಳು ಮತ್ತು ಮಲಯಾಳಂಗಳಿಗೆ ಹೋಲುತ್ತದೆ ಎಂದು ಹೇಳುತ್ತಿದ್ದಾರೆ.
ಲೋಗೋ ತಮಿಳು ವರ್ಣಮಾಲೆಯ ‘ಕು’ ಅಕ್ಷರವನ್ನು ಹೋಲುತ್ತದೆ ಎಂದು ಕೆಲವರು ಹೇಳಿದರೆ, ಇತರರು ಲೋಗೋ ಮಲಯಾಳಂ ಅಕ್ಷರಗಳಾದ ‘ಥ್ರ್’ ಮತ್ತು ‘ಕ್ರಾ’ ಅನ್ನು ಹೋಲುತ್ತದೆ ಎಂದು ವಾದಿಸಿದ್ದಾರೆ.
ಲೋಗೋ ಹಿಂದಿಯ ಓಂ ಅಕ್ಷರವನ್ನು ಹೋಲುತ್ತದೆ ಎಂದು ಇತರರು ಪ್ರತಿಪಾದಿಸಿದ್ದು, ಮತ್ತೆ ಕೆಲವು ಮಂದಿ ಇದು ಸಿಹಿತಿಂಡಿ ಜಿಲೇಬಿಯಂತೆ ಕಾಣುತ್ತದೆ ಎಂದು ವ್ಯಂಗ್ಯಾತ್ಮಕ ಟೀಕೆಗಳನ್ನು ಸಹ ಮಾಡಿದ್ದಾರೆ.
ಥ್ರೆಡ್ ಬಿಡುಗಡೆಯಾದ 10 ಗಂಟೆಗಳ ನಂತರ 14 ಮಿಲಿಯನ್ ಜನರು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ್ದಾರೆ.