ಫೇಸ್ಬುಕ್ ಮಾತೃ ಕಂಪನಿ ಮೆಟಾ ಕೂಡಾ ಭಾರತೀಯ ಬಳಕೆದಾರರಿಗಾಗಿ ತನ್ನ ಹೊಸ ಎಐ ಅಸಿಸ್ಟೆಂಟ್ ಅನ್ನು ತರಲು ಮುಂದಾಗಿದೆ. ಮೆಟಾದ ಎಐ ಅಸಿಸ್ಟೆಂಟ್ ಅನ್ನು ಬಳಸಿಕೊಂಡು ವಾಟ್ಸಪ್, ಫೇಸ್ಬುಕ್ ಮೆಸೆಂಜರ್ ಹಾಗೂ ಇನ್ಸ್ಟಾಗ್ರಾಂ ಬಳಕೆದಾರರು ಇತರ ಫೀಚರ್ಗಳನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.
ಪ್ರಮುಖ ವಿಶೇಷತಗಳು:
● ಪ್ರಪಂಚದ ಅತಿ ಪ್ರಮುಖ ಎಐ ಅಸಿಸ್ಟೆಂಟ್ ಗಳಲ್ಲಿ ಒಂದಾದ ಮೆಟಾ ಎಐ ಇದೀಗ ವಾಟ್ಸ್ಆ್ಯಪ್, ಫೇಸ್ಬುಕ್, ಮೆಸೆಂಜರ್, ಇನ್ಸ್ಟಾಗ್ರಾಮ್ ಮತ್ತು ಮೆಟಾ.ಎಐ ಮೂಲಕ ಭಾರತ ಪ್ರವೇಶಿಸಿದೆ. ಈ ಎಐ ಅಸಿಸ್ಟೆಂಟ್ ಅನ್ನು ಮೆಟಾ ಲಾಮ 3 ಬಳಸಿಕೊಂಡು ಸಿದ್ಧಗೊಳಿಸಲಾಗಿದ್ದು, ಇದು ಇಲ್ಲಿಯವರೆಗಿನ ನಮ್ಮ ಅತ್ಯಾಧುನಿಕ ಎಲ್ಎಲ್ಎಂ ಆಗಿದೆ.
● ನೀವು ಬಳಸುತ್ತಿರುವ ಆಪ್ ಅನ್ನು ಕ್ಲೋಸ್ ಮಾಡದೆಯೇ ನಮ್ಮ ಎಲ್ಲಾ ಆಪ್ ಗಳಲ್ಲಿ ಫೀಡ್, ಚಾಟ್ಗಳು ಮತ್ತು ಇತ್ಯಾದಿಗಳಲ್ಲಿ ನಿಮ್ಮ ಕೆಲಸಗಳನ್ನು ಮಾಡಲು, ಕಂಟೆಂಟ್ ರಚಿಸಲು ಮತ್ತು ವಿಷಯಗಳನ್ನು ತಿಳಿದುಕೊಳ್ಳಲು ನೀವು ಮೆಟಾ ಎಐ ಅನ್ನು ಬಳಸಬಹುದು.
● ನಿಮ್ಮ ಕಂಪ್ಯೂಟರ್ ಬಳಸಿಕೊಂಡು ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದರೆ ನೀವು ಮೆಟಾ.ಎಐಗೆ ಭೇಟಿ ನೀಡಿ. ಗಣಿತದ ಸಮಸ್ಯೆಯನ್ನು ಪರಿಹರಿಸಲು ಸಲಹೆಯ ಅಗತ್ಯವಿದ್ದರೆ, ಇಮೇಲ್ ಅನ್ನು ಹೆಚ್ಚು ವೃತ್ತಿಪರವಾಗಿ ಪರಿವರ್ತಿಸಲು ಸಹಾಯ ಬೇಕಿದ್ದರೆ ಆಗ ಮೆಟಾ ಎಐ ನಿಮಗೆ ಸಹಾಯ ಮಾಡುತ್ತದೆ.