ನವದೆಹಲಿ: ಇಬ್ಬರೂ ಡೇಟಿಂಗ್ ಆ್ಯಪ್ನಲ್ಲಿ ಭೇಟಿಯಾಗಿದ್ದಾರೆಯೇ ಹೊರತು ಮ್ಯಾಟ್ರಿಮೋನಿಯಲ್ ಆ್ಯಪ್ನಲ್ಲಿ ಅಲ್ಲ ಎಂದು ದೆಹಲಿ ಹೈಕೋರ್ಟ್ ಮಹಿಳೆಯನ್ನು ಮದುವೆಯಾಗುವುದಾಗಿ ಹೇಳಿ ಅತ್ಯಾಚಾರ ಎಸಗಿದ ಆರೋಪಿಗೆ ಜಾಮೀನು ನೀಡುವಾಗ ಹೇಳಿದೆ.
ಮೇಲ್ನೋಟಕ್ಕೆ, ಲೈಂಗಿಕ ಸಂಭೋಗವು ಒಪ್ಪಿಗೆಯಂತೆ ಕಾಣುತ್ತದೆ. ತಪ್ಪು ಕಲ್ಪನೆಯ ಮೇಲೆ ಸಮ್ಮತಿ ಪಡೆದ ಬಗ್ಗೆ ಯಾವುದೇ ಸುಳ್ಳು ಭರವಸೆ ಕಾಣಿಸುತ್ತಿಲ್ಲ ಎಂದು ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅಭಿಪ್ರಾಯಪಟ್ಟಿದ್ದಾರೆ.
ದೂರುದಾರರು ಮತ್ತು ಅರ್ಜಿದಾರರು ಡೇಟಿಂಗ್ ಅಪ್ಲಿಕೇಶನ್ “ಹಿಂಜ್” ನಲ್ಲಿ ಭೇಟಿಯಾಗಿದ್ದಾರೆ. ಮ್ಯಾಟ್ರಿಮೋನಿಯಲ್ ಅಪ್ಲಿಕೇಶನ್ನಲ್ಲಿ ಅಲ್ಲ. ಅವರ ನಡುವೆ ಹಲವಾರು WhatsApp ಸಂದೇಶಗಳ ವಿನಿಮಯವಾಗಿದೆ. ಯಾವುದೇ ಸಂದೇಶಗಳಲ್ಲಿ ಮದುವೆ ಬಗ್ಗೆ ಯಾವುದೇ ಭರವಸೆ ಅಥವಾ ಪ್ರಸ್ತಾಪವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ “ಲೈಂಗಿಕ ಸಂಪರ್ಕ ಪ್ರಾರಂಭಿಸಿದ” ಎಂದು ಮಹಿಳೆ ಆರೋಪಿಸಿದ್ದು, ಪುರುಷನ ವಿರುದ್ಧ ಐಪಿಸಿ ಅತ್ಯಾಚಾರ ಮತ್ತು ವಂಚನೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪುರುಷನ ಮೊಬೈಲ್ ಫೋನ್ನಲ್ಲಿ ಮಹಿಳೆಯ ಅಶ್ಲೀಲ ಛಾಯಾಚಿತ್ರಗಳನ್ನು ಆಕೆಯ ಒಪ್ಪಿಗೆಯೊಂದಿಗೆ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.
ಎಫ್ಎಸ್ಎಲ್ನಿಂದ ಅರ್ಜಿದಾರರ ಮೊಬೈಲ್ ಫೋನ್ನಿಂದ ವಶಪಡಿಸಿಕೊಂಡಿರುವ ಪ್ರಾಸಿಕ್ಯೂಟ್ರಿಕ್ಸ್ನ ಅಶ್ಲೀಲ ಛಾಯಾಚಿತ್ರಗಳು ಮತ್ತು ವೀಡಿಯೊಗಳಿಗೆ ಸಂಬಂಧಿಸಿದಂತೆ, ಅಂತಹ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ತನ್ನ ಒಪ್ಪಿಗೆಯೊಂದಿಗೆ ತೆಗೆದುಕೊಳ್ಳಲಾಗಿದೆ ಎಂದು ದೂರುದಾರೆ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಲೈಂಗಿಕ ಸಂಭೋಗವು ಸಮ್ಮತಿಯಂತೆ ಕಾಣುತ್ತದೆ ಮತ್ತು ಮದುವೆಯ ಯಾವುದೇ ಸುಳ್ಳು ಭರವಸೆ ತೋರುತ್ತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.