ಫಿಫಾ ವರ್ಲ್ಡ್ ಕಪ್ ಎತ್ತಿಹಿಡಿದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡ್ತಿದ್ದಾರೆ. ವರ್ಲ್ಡ್ ಕಪ್ ಎತ್ತಿಹಿಡಿದ ಮೆಸ್ಸಿ ಫೋಟೋ ಇನ್ಸ್ಟಾಗ್ರಾಂ ನಲ್ಲಿ ಅತಿ ಹೆಚ್ಚು ಲೈಕ್ ಆದ ಫೋಟೋಗೆ ಪಾತ್ರವಾಗಿದೆ. ಈ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ಜೊತೆ ಮೆಸ್ಸಿ ಚೆಸ್ ಆಡ್ತಿದ್ದ ಫೋಟೋ ಕೆಳ ಕ್ರಮಾಂಕಕ್ಕೆ ಇಳಿದಿದೆ.
ವಿಶ್ವಕಪ್ ಗೆದ್ದ ವೇಳೆ ಲುಸೈಲ್ ಸ್ಟೇಡಿಯಂನಲ್ಲಿ ಆರ್ಜೆಂಟೀನಾ ತಂಡದ ಸಂತೋಷದ ಆಚರಣೆಯಲ್ಲಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಹಿಡಿದಿರುವ ಮೆಸ್ಸಿಯ ಫೋಟೋ ಇನ್ ಸ್ಟಾಗ್ರಾಂ ನಲ್ಲಿ ಹೆಚ್ಚು ಲೈಕ್ ಪಡೆದ ಫೋಟೋಗಳಲ್ಲಿ ಇದೀಗ ಮೊದಲನೆಯ ಸ್ಥಾನದಲ್ಲಿದೆ.
60 ಮಿಲಿಯನ್ ಗೂ ಹೆಚ್ಚು ಲೈಕ್ಗಳೊಂದಿಗೆ ಇದು ಒಟ್ಟಾರೆಯಾಗಿ ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚು ಇಷ್ಟಪಟ್ಟ ಫೋಟೋವಾಗಿದೆ.
ವಿಶ್ವದ ಚಾಂಪಿಯನ್ಸ್!!!!!!! ನಾನು ಅದಕ್ಕಾಗಿ ಹಲವು ಬಾರಿ ಕನಸು ಕಂಡಿದ್ದೆ. ನನ್ನ ಕುಟುಂಬಕ್ಕೆ, ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಮತ್ತು ನಮ್ಮನ್ನು ನಂಬಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ಅರ್ಜೆಂಟೀನಾದ ನಾವು ಒಟ್ಟಾಗಿ ಹೋರಾಡಿದಾಗ ಮತ್ತು ಒಗ್ಗೂಡಿದಾಗ ನಾವು ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ನಾವು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ. ಅರ್ಹತೆ ಈ ಗುಂಪಿನದು, ಇದು ವ್ಯಕ್ತಿಗಳಿಗಿಂತ ಮೇಲಿದೆ. ಎಲ್ಲಾ ಅರ್ಜೆಂಟೀನಾದ ಒಂದೇ ಕನಸಿಗಾಗಿ ಹೋರಾಡುವ ಎಲ್ಲರ ಶಕ್ತಿಯಾಗಿದೆ … ನಾವು ಅದನ್ನು ಮಾಡಿದ್ದೇವೆ ! ಲೆಟ್ಸ್ ಗೋ ಅರ್ಜೆಂಟೀನಾ ಡ್ಯಾಮ್ ಎಂದು ಮೆಸ್ಸಿ ಪೋಸ್ಟ್ ನಲ್ಲಿ ಬರೆದಿದ್ದಾರೆ.