ಅಮೆರಿಕಾದ ನ್ಯೂಯಾರ್ಕ್ ರಾಜ್ಯದ ಪುಟ್ಟ ಗ್ರಾಮ ಬ್ರಾಕ್ ಪೋರ್ಟ್ ನ ಶಾಲಾ ಶಿಕ್ಷಕರೊಬ್ಬರಿಗೆ ಇತ್ತೀಚೆಗೆ ಒಂದು ಆಶ್ಚರ್ಯ ಕಾದಿತ್ತು. ಹನ್ನೊಂದು ವರ್ಷದ ಹಿಂದೆ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಬರೆದಿದ್ದ ಸಂದೇಶ ಅವರ ಕೈಗೆ ಸಿಕ್ಕಿದ್ದೇ ಆಶ್ಚರ್ಯದ ವಿಚಾರವಾಗಿದೆ.
ಶಾಲಾ ಚಟುವಟಿಕೆಗಳ ನಿಮಿತ್ತ ಕ್ರಿಸ್ಟೋಫರ್ ಆಲ್ ಬ್ರೆಕ್ಟ್ ಎಂಬ ಈ ಶಿಕ್ಷಕರು 2011 ರಲ್ಲಿ ಮಕ್ಕಳಿಗೆ ಸಂದೇಶ ಬರೆದು ಒಂದು ಬಾಟಲಿಯಲ್ಲಿ ಇಟ್ಟು ಬಿಗಿಯಾಗಿ ಮುಚ್ಚಿ ಅಟ್ಲಾಂಟಿಕ್ ಸರೋವರದಲ್ಲಿ ಎಸೆಯುವಂತೆ ತಿಳಿಸಿದ್ದರು.
ತಾಯಿ ಹಸೆಮಣೆ ಏರುವ ಮುನ್ನ ಅಪ್ಪಿಕೊಳ್ಳಲು ಓಡೋಡಿ ಬಂದ ಕಂದ
ಅದರಂತೆ ವಿದ್ಯಾರ್ಥಿಗಳು ಎಸೆದಿದ್ದ ಬಾಟಲಿಗಳಲ್ಲಿ ಒಂದು ನ್ಯೂಯಾರ್ಕ್ ನಿಂದ 1000 ಮೈಲಿಯಷ್ಟು ದೂರದಲ್ಲಿರುವ ಬಹಮಾಸ್ ಕಡಲತೀರದಲ್ಲಿ ಪತ್ತೆಯಾಗಿದ್ದು, ಅದನ್ನು ಆಲ್ ಬ್ರೆಕ್ಟ್ ಅವರಿಗೆ ಹಸ್ತಾಂತರಿಸಲಾಗಿತ್ತು. ಈ ಚಿತ್ರವನ್ನು ಆಲ್ ಬ್ರೆಕ್ಟ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಸಂದೇಶವನ್ನು ತಮ್ಮ ವಿದ್ಯಾರ್ಥಿ ಜೇರ್ಡ್ ಬರೆದಿದ್ದರು ಎಂದು ತಿಳಿಸಿದ್ದಾರೆ.
2011 ರಲ್ಲಿ ನಮ್ಮ ವಿದ್ಯಾರ್ಥಿಗಳು ಸಂದೇಶಗಳನ್ನು ಬರೆದು ಬಾಟಲಿಗಳಲ್ಲಿ ಹಾಕಿ ಅಟ್ಲಾಂಟಿಕ್ ಸರೋವರದಲ್ಲಿ ಎಸೆದಿದ್ದರು. ಈ ಪೈಕಿ ಜೇರ್ಡ್ ಬರೆದಿದ್ದ ಬಾಟಲಿ ಮಹಿಳೆಯೊಬ್ಬರಿಗೆ ಸಿಕ್ಕಿದ್ದು, ಅವರು, ಆಲ್ ಬ್ರೆಕ್ಟ್ ಅವರಿಗೆ ಇಮೇಲ್ ಮಾಡಿ ನಿಮ್ಮ ವಿದ್ಯಾರ್ಥಿ ಬರೆದಿರುವ ಸಂದೇಶದ ಬಾಟಲಿ ದೊರೆತಿದೆ ಎಂದು ತಿಳಿಸಿದ್ದಾರೆ.
ಇದರಿಂದ ಆಲ್ ಬ್ರೆಕ್ಟ್ ಸಂತೋಷ ಮತ್ತು ಆಶ್ಚರ್ಯಗೊಂಡಿದ್ದಾರೆ. ಅಂದಹಾಗೆ ಸಂದೇಶ ಬರೆದಿದ್ದ ಜೇರ್ಡ್ ಪೆನ್ ಸ್ಟೇಟ್ ನಲ್ಲಿ ಜೂನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರಂತೆ.