ಸಾರ್ಡಿನಿಯಾದಲ್ಲಿನ ಸಸ್ಸಾರಿಯದ 41 ವರ್ಷದ ವೈದ್ಯ ರಾಬರ್ಟೊ ಬಿದ್ದೌ ಅವರು ಇಟಲಿಯ ಆಗಸದಲ್ಲಿ ಅಲಂಕಾರ ಮೂಡಿಸುವ ಸ್ಟಾರ್ಲಿಂಗ್ ಹಕ್ಕಿಗಳ ಹಿಂಡಿನ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರತಿ ವರ್ಷ ವಲಸೆ ಹೋಗುವ ಈ ಹಕ್ಕಿಗಳು ಒಮ್ಮೆಲೇ ಹಿಂಡು ಹಿಂಡಾಗಿ ಕಾಣಿಸಿಕೊಂಡಿದ್ದು ಇದು ಆಕಾಶದಲ್ಲಿ ಆಕರ್ಷಕವಾಗಿ ಮೂಡಿಬಂದಿದೆ.
ಈ ಸಮ್ಮೋಹನಗೊಳಿಸುವ ವಿದ್ಯಮಾನವು ಪ್ರತಿ ವರ್ಷವೂ ನಿಗದಿತ ಕಾಲದಲ್ಲಿ ಸಂಭವಿಸುತ್ತದೆ. ವಿಸ್ಮಯಗೊಳಿಸುವ ಈ ದೃಶ್ಯ ವೈದ್ಯ ಬಿದ್ದೌ ಮತ್ತು ಅಸಂಖ್ಯಾತ ಮಂದಿಯನ್ನು ಪ್ರಕೃತಿಯ ಕಲಾತ್ಮಕತೆಗೆ ವಿಸ್ಮಯಗೊಳ್ಳುವಂತೆ ಮಾಡಿದೆ.
ನವೆಂಬರ್‌ನಲ್ಲಿ ಸೆರೆಹಿಡಿಯಲಾದ ವೀಡಿಯೊದಲ್ಲಿ ಸಾವಿರಾರು ಸ್ಟಾರ್ಲಿಂಗ್‌ಗಳ ಹಿಂಡು ಆಕಾಶದಲ್ಲಿ ಸಂಕೀರ್ಣವಾದ ಮಾದರಿಗಳನ್ನು ರೂಪಿಸಿವೆ. ಇವು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.
“ಈ ಪಕ್ಷಿಗಳು ಸೂರ್ಯಾಸ್ತದ ಸಮಯದಲ್ಲಿ ನಗರದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಮರಗಳಲ್ಲಿ ವಿಶ್ರಾಂತಿ ಪಡೆಯುತ್ತವೆ” ಎಂದು ವೈದ್ಯ ರಾಬರ್ಟೊ ಬಿದ್ದೌ ದಿ ಗಾರ್ಡಿಯನ್‌ಗೆ ತಿಳಿಸಿದರು. “ಅವು ಉತ್ತರದಿಂದ ದಕ್ಷಿಣಕ್ಕೆ ವಲಸೆ ಹೋಗುತ್ತವೆ. ಶರತ್ಕಾಲದಲ್ಲಿ ಸಸ್ಸಾರಿಗೆ ಆಗಮಿಸುತ್ತವೆ. ಈ ವೇಳೆ ಜನ ಅವುಗಳನ್ನು ವೀಕ್ಷಿಸುತ್ತಾರೆ ಎಂದಿದ್ದಾರೆ.