alex Certify ಇಲ್ಲಿದೆ ʼರೇನ್‌ ಬೋʼ ಪ್ಲುಟೊದ ಮೋಡಿ ಮಾಡುವ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼರೇನ್‌ ಬೋʼ ಪ್ಲುಟೊದ ಮೋಡಿ ಮಾಡುವ ಫೋಟೋ

ಯುಎಸ್​ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಸಾಮಾಜಿಕ ಜಾಲತಾಣದದ ಹ್ಯಾಂಡಲ್​ನಲ್ಲಿ ಪ್ಲುಟೊದ ಅತ್ಯದ್ಭುತ ಫೋಟೋವನ್ನು ಹಂಚಿಕೊಂಡಿದೆ.

ಸ್ವಾಭಾವಿಕವಾಗಿ ಫ್ಲುಟೋ ಈ ಅಬ್ಬರದಿಂದ ಕಾಣುವುದಿಲ್ಲ. ಗ್ರಹದ ವಿಭಿನ್ನ ಪ್ರದೇಶಗಳನ್ನು ಹೈಲೈಟ್​ ಮಾಡಲು ನ್ಯೂ ಹೊರೈಜನ್​ ವಿಜ್ಞಾನಿಗಳು ಈ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.

ನಾಸಾ ಪ್ರಕಾರ, ಪ್ಲುಟೊ​ ಪರ್ವತಗಳೊಂದಿಗೆ ಸಂಕೀರ್ಣವಾದ ವೈವಿಧ್ಯಮಯ ಮೇಲ್ಮೈಯನ್ನು ಹೊಂದಿದೆ, ಕಣಿವೆಗಳ ಜಾಲವಿದೆ, ಹೆಚ್ಚು ಕುಳಿಗಳಿರುವ ಭೂಪ್ರದೇಶವಿದ್ದು, ಹಿಮಾವೃತ ಬಯಲು ಮತ್ತು ದಿಬ್ಬಗಳಿವೆ.

ನಾಸಾ ಬಾಹ್ಯಾಕಾಶದಿಂದ ಆಸಕ್ತಿದಾಯಕ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತದೆ, ಈ ಚಿತ್ರ ನೆಟ್ಟಿಗರಿಂದ ಪ್ರಶಂಸೆ ಹಾಗೂ ಟೀಕೆಗೂ ಒಳಗಾಯಿತು. “ಸರಳವಾಗಿ ಹೇಳುವುದಾದರೆ: ಪ್ಲುಟೊ ಹೋಳಿಯನ್ನು ಆಚರಿಸುತ್ತಿದೆ ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ.

2006ರ ಜನವರಿ 19ರಂದು ನಾಸಾದಿಂದ ಉಡಾವಣೆಗೊಂಡ ನ್ಯೂ ಹೊರೈಜನ್ಸ್​ ಬಾಹ್ಯಾಕಾಶ ನೌಕೆ ಪ್ಲುಟೊದ ಚಿತ್ರವನ್ನು ಕ್ಲಿಕ್​ ಮಾಡಿತು. ಹಾಗೆಯೇ ಇದು ಪ್ಲುಟೊ ಮತ್ತು ಅದರ ಚಂದ್ರನ ಕುರಿತು ಅಧ್ಯಯನ ನಡೆಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...