ಬೆಳಗಾವಿ : ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಣೆಗೆ ಅನುಮತಿ ನೀಡದಿದ್ದರೂ ಎಂಇಎಸ್ ಉದ್ದಟತನ ಮೆರೆದಿದೆ.
ಅನುಮತಿ ನೀಡದಿದ್ದರೂ ನಾಡದ್ರೋಹಿಗಳು ನಿಪ್ಪಾಣಿ, ಕಾರವಾರ, ಬೆಳಗಾವಿ, ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ್ದಾರೆ. ಕಪ್ಪು ಪಟ್ಟಿ ಧರಿಸಿ ಮೆರವಣಿಗೆ ಮಾಡಿ ಎಂಇಎಸ್ ಪುಂಡರು ಕರಾಳ ದಿನ ಆಚರಿಸಿದ್ದಾರೆ.
ಬೆಳಗಾವಿಯ ಸುಭಾಷ್ ನಗರದ ಆಟದ ಮೈದಾನದಿಂದ ಮೆರವಣಿಗೆಯನ್ನು ಪ್ರಾರಂಭಿಸಲಾಗಿದ್ದು, ಜಿಲ್ಲಾಡಳಿತದ ನಿಷೇಧದ ಮಧ್ಯೆಯೂ ಮೆರವಣಿಗೆ ನಡೆಸಲಾಗಿದೆ. ಕಪ್ಪು ಪಟ್ಟಿ ಧರಿಸಿ ಆಕ್ರೋಶವನ್ನು ಹೊರಹಾಕಿದ ನಾಡದ್ರೋಹಿಗಳು ರಾಜ್ಯ ಸರ್ಕಾರದ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ. ಆದರೂ ಪೊಲೀಸರು ಏಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.