
ಕೊಲ್ಲಾಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಎಂಇಎಸ್ ಪುಂಡಾಟ ಮುಂದುವರೆದಿದೆ. ಎಂಇಎಸ್ ಕಾರ್ಯಕರ್ತರು ಕರ್ನಾಟಕದ ಬಸ್ ಗಳನ್ನು ತಡೆದು ಹುಚ್ಚಾಟ ಮೆರೆದಿದ್ದಾರೆ.
ಕೊಲ್ಲಾಪುರದಿಂದ ಬೆಳಗಾವಿಗೆ ಬರುತ್ತಿದ್ದ ಬಸ್ ಗಳನ್ನು ಮಾರ್ಗಮಧ್ಯೆ ತಡೆದು, ಬಸ್ ಗಳಿಗೆ ಭಗವಾ ಧ್ವಜಗಳನ್ನು ಕಟ್ಟಿ ಎಂಇಎಸ್ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಬೆಳಗಾವಿಗೆ ಬರುತ್ತಿರುವ ಎಲ್ಲಾ ಬಸ್ ಗಳನ್ನು ತಡೆದು ನಿಲ್ಲಿಸಿರುವ ಎಂಇಎಸ್ ಕಾರ್ಯಕರ್ತರು ಬಸ್ ಗಳಿಗೆ ಧ್ವಜಗಳನ್ನು ಕಟ್ಟಿ ಮಹಾರಾಷ್ಟ್ರಪರ ಘೋಷಣೆ ಕೂಗಿ ಪುಂದಾಟ ಮೆರೆದಿದ್ದಾರೆ.