
ದಕ್ಷಿಣ ಇಟಲಿಯ ಮೀನುಗಾರರ ಗ್ರಾಮ ಪ್ಯಗಾಲಿಯಾದಲ್ಲಿರುವ ಮರ್ಮೇಡ್ ಪುತ್ಥಳಿಯೊಂದು ಭಾರೀ ’ಪ್ರಚೋದನಾಕಾರಿಯಾಗಿರುವ’ ಕಾರಣ ವಿವಾದದ ಕೇಂದ್ರ ಬಿಂದುವಾಗಿದೆ.
ಇಲ್ಲಿನ ಮೊನೊಪೊಲಿಯ ಲ್ಯೋಗಿ ರೊಸ್ಸೋ ಆರ್ಟ್ಸ್ ಶಾಲೆಯ ವಿದ್ಯಾರ್ಥಿಗಳು ಈ ಪುತ್ಥಳಿ ನಿರ್ಮಿಸಿದ್ದು, ಖ್ಯಾತ ವಿಜ್ಞಾನಿ ರೀಟಾ ಲೆವಿ-ಮೊಂಟಾಲ್ಕಿನಿ ಹೆಸರಿನಲ್ಲಿರುವ ಚೌಕವೊಂದರ ಬಳಿ ಇದನ್ನು ಇರಿಸಲಾಗಿದೆ.
“ದಷ್ಟಪುಷ್ಟವಾಗಿರುವ ಮಹಿಳೆಯರ ಗೌರವಾರ್ಥ ಈ ಪುತ್ಥಳಿ ನಿರ್ಮಿಸಲಾಗಿದೆ” ಎಂದು ಕಲಾ ಶಾಲೆಯ ಮುಖ್ಯ ಶಿಕ್ಷಕಿ ಅಡೋಲ್ಫೋ ಮಾರ್ಸಿಯಾನೋ ತಮ್ಮ ವಿದ್ಯಾರ್ಥಿಗಳ ಕಲೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರತಿಮೆಯ ಅನಾವರಣ ಇನ್ನಷ್ಟೇ ಆಗಬೇಕಿದ್ದು, ಅದಾಗಲೇ ಸಾಕಷ್ಟು ಪರ-ವಿರೋಧಗಳ ಮಾತುಗಳಿಗೆ ಗ್ರಾಸವಾಗಿದೆ.
“ಈ ಪ್ರತಿಮೆಯು ಖ್ಯಾತ ವಿಜ್ಞಾನಿಯನ್ನು ಪ್ರತಿಬಿಂಬಿಸುತ್ತಿಲ್ಲ. ಬದಲಾಗಿ ಕೃತಕ ಸ್ತನಗಳು ಹಾಗೂ ಪೃಷ್ಠವಿರುವ ಮರ್ಮೇಡ್‌ನಂತೆ ಕಾಣುತ್ತಿದೆ,” ಎಂದು ಇಟಾಲಿಯನ್ ನಟಿ ಟಿಜ಼ಿಯಾನಾ ಶಿಯಾವರೆಲ್ಲಿ ಹೇಳಿದ್ದಾರೆ.
ಸಾಗರವನ್ನೇ ಥೀಂ ಆಗಿಟ್ಟುಕೊಂಡು ನಗರದ ವಿವಿಧ ಪ್ರದೇಶಗಳಲ್ಲಿ ಅಳವಡಿಸಲು ಒಂದಷ್ಟು ಪ್ರತಿಮೆಗಳನ್ನು ರಚಿಸಲು ಮೊನೊಪೊಲಿಯ ಮೇಯರ್ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
)