ಬಹಳ ಕಾಲ ಸಂಚಾರಿ ಸಿಗ್ನಲ್‌ಗಳ ಬಳಿ ಸಿಲುಕಿಕೊಳ್ಳುವಂಥ ಕಿರಿ ಕಿರಿ ಅನುಭವ ಬೇರೊಂದಿಲ್ಲ. ಈ ವೇಳೆ ಟೈಂ ಪಾಸ್ ಮಾಡಲು ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಸಖತ್ತಾದ ಪ್ಲಾನ್ ಒಂದನ್ನು ಕಂಡುಕೊಂಡಿದ್ದಾರೆ.
ಆನ್ಲೈನ್‌ನಲ್ಲಿ ಸಿಗ್ನಲ್ ಹೆಲ್ಮೆಟ್ ಮಾನವ ಎಂದೇ ಖ್ಯಾತರಾಗಿರುವ ಈತ, ರಸ್ತೆಯಲ್ಲಿ ಕೆಂಪು ಸಿಗ್ನಲ್ ಬರುತ್ತಲೇ ಬಾಲಿವುಡ್‌ನ ಹಾಡುಗಳಿಗೆ ಮಸ್ತ್ ಸ್ಟೆಪ್ ಹಾಕುತ್ತಾ ಸುತ್ತಲಿನ ಸಂಚಾರಿಗಳಿಗೂ ಸಹ ಬೋರ್ ಆಗದಂತೆ ನೋಡಿಕೊಳ್ಳುತ್ತಾರೆ.
2000 ರೂ. ಆಸೆಗೆ ಚರಂಡಿ ನೀರು ಕುಡಿದ 60 ವರ್ಷದ ವೃದ್ಧ
ಕೆಂಪು ದೀಪ ಬೀಳುತ್ತಲೇ ಒಂದು ಕ್ಷಣವೂ ತಡಮಾಡದೇ ರಸ್ತೆಗಿಳಿದು ಶಾರುಖ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ರಾ.ಒನ್ ಚಿತ್ರದ ’ಚಮ್ಮಕ್ ಚಲ್ಲೋ’ ಹಾಡಿಗೆ ಮಸ್ತ್ ಸ್ಟೆಪ್ ಹಾಕಿರುವ ಈತ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.
’ಹೆಲ್ಮೆಟ್ ಮಾನವ’ ಖ್ಯಾತಿಯ ಸುಬೋಧ್ ಸುನಂದಾ ಬಾಪು ಲೊಂಡೇ ಮಹಾರಾಷ್ಟ್ರದ ಕಲ್ಯಾಣ್ ನಿವಾಸಿ. ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಇಂಥ ಸಖತ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾ ಸಾಕಷ್ಟು ಗಮನ ಸೆಳೆದಿದ್ದಾರೆ.