ಉತ್ತರ ಭಾರತದ ಅನೇಕ ಭಾಗಗಳಲ್ಲಿ ಹೊಸದಾಗಿ ಮಂಜು ಸುರಿಯಲು ಆರಂಭಿಸಿದ್ದರೆ, ದೇಶದ ಇತರ ಭಾಗಗಳಲ್ಲೂ ಸಹ ತಾಪಮಾನದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.
ಪಶ್ಚಿಮ ಘಟ್ಟದ ಸಾಲುಗಳಲ್ಲಿ ಬರುವ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ದಾಖಲೆಯ ಚಳಿ ಕಂಡು ಬಂದಿದ್ದು, ತಾಪಮಾನವು ಶೂನ್ಯ ಡಿಗ್ರಿಗೆ ಇಳಿದ ಘಟನೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಭವಿಸಿದೆ. ಈ ಮೂಲಕ ಮಹಾಬಲೇಶ್ವರವು ಮಹಾರಾಷ್ಟ್ರದ ಅತ್ಯಂತ ಶೀತಮಯ ಪ್ರದೇಶವಾಗಿದೆ.
ʼಚಳಿಗಾಲʼದಲ್ಲಿ ಚರ್ಮಕ್ಕೆ ಇರಲಿ ವಿಶೇಷ ಆರೈಕೆ
ಮಹಾಬಲೇಶ್ವರದ ವೆನ್ನಾ ಕೊಳದ ಬಳಿ ಶೂನ್ಯ ಡಿಗ್ರಿ ತಾಪಮಾನ ದಾಖಲಾಗಿದೆ. ಗುರುವಾರ ಸಂಜೆ 6 ಗಂಟೆಯ ವೇಳೆ 2.8 ಡಿಗ್ರಿಗೆ ಇಳಿದ ತಾಪಮಾನ, ಬೆಳಗ್ಗಿನ ಜಾವ ಹೊತ್ತಿನಲ್ಲಿ ಸ್ವಲ್ಪ ಕಾಲ ಶೂನ್ಯದ ಮಟ್ಟವನ್ನೂ ತಲುಪಿತ್ತು ಎಂದು ಪ್ರದೇಶದ ನಿವಾಸಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮಹಾಬಲೇಶ್ವರದ ತಾಪಮಾನವು ಸಾಮಾನ್ಯಕ್ಕಿಂತ 4 ಡಿಗ್ರಿಯಷ್ಟು ಕಡಿಮೆಯಾಗಿತ್ತು. ಗಿರಿಧಾಮದ ಕೆಲ ಪ್ರದೇಶಗಳಲ್ಲಿ ಹೆಪ್ಪುಗಟ್ಟಿದ ಇಬ್ಬನಿಯ ಚಿತ್ರಗಳನ್ನು ಸೆರೆ ಹಿಡಿಯಲಾಗಿದ್ದು, ಇವುಗಳಲ್ಲಿ ಒಂದು ಚಿತ್ರವನ್ನು ಪುಣೆ ಮಿರರ್ ಪ್ರಕಟಿಸಿದೆ.