ಆಟೋಮೊಬೈಲ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿ ಟಾಪ್ ಬ್ರ್ಯಾಂಡ್ ಎನಿಸಿಕೊಂಡ ಮರ್ಸಿಡಿಸ್ ಬೆಂಜ್
ತನ್ನ ಎರಡು ಟಾಪ್ ಎಂಡ್ ವಾಹನಗಳಾದ Mercedes-AMG G63 ಮತ್ತು Mercedes-Maybach GLS 600 ಗೆ ಗ್ರಾಹಕರಿಂದ ಆರ್ಡರ್ ತೆಗೆದುಕೊಳ್ಳಲು ಆರಂಭಿಸಿದೆ.
ಸದ್ಯ ಬೆಂಜ್ ಗ್ರಾಹಕರಿಗೆ ಮಾತ್ರ ಪ್ರತ್ಯೇಕವಾಗಿ ಬುಕ್ಕಿಂಗ್‌ಗಳನ್ನು ತೆರೆದಿದೆ ಎಂಬುದು ಗಮನಾರ್ಹ ಸಂಗತಿ. ಹಾಗೆಯೇ ಭಾರತ ಮಾರುಕಟ್ಟೆಯಲ್ಲಿ ಟಾಪ್- ಎಂಡ್ ಐಷಾರಾಮಿ ವಾಹನಗಳಿಗೆ ಹೆಚ್ಚುತ್ತಿರುವ ಗ್ರಾಹಕರ ಆದ್ಯತೆ ಗಮನಿಸಿ ವಿಶೇಷ ಆದ್ಯತೆ ನೀಡಿರುವುದು ಕಂಡುಬರುತ್ತಿದೆ.
ಮರ್ಸಿಡಿಸ್-ಬೆನ್ಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂತೋಷ್ ಅಯ್ಯರ್ ಈ ಕುರಿತು ವಿವರಣೆ ನೀಡಿ, ನಮ್ಮ ಟಾಪ್ ಎಂಡ್ ವಾಹನಗಳು ಅಗಾಧ ಪ್ರತಿಕ್ರಿಯೆಯನ್ನು ಪಡೆದಿವೆ. ಭಾರತಕ್ಕೆ ಈ ಸೀಮಿತ ಉತ್ಪಾದನೆಯನ್ನು ಖಾತ್ರಿಪಡಿಸುತ್ತಿದ್ದು , ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಪ್ರತ್ಯೇಕವಾಗಿ ಟಾಪ್- ಎಂಡ್ ಮಾಡೆಲ್‌ಗಳಿಗಾಗಿ ಬುಕ್ಕಿಂಗ್‌ಗಳನ್ನು ಪುನಃ ತೆರೆಯುತ್ತೇವೆ ಎಂದಿದ್ದಾರೆ.
ಜಾಗತಿಕ ಪೋರ್ಟ್‌ಫೋಲಿಯೊದಿಂದ ಈ ವಿಭಾಗದಲ್ಲಿ ಹೊಸ ಮಾದರಿಯ ಪರಿಚಯವನ್ನು ಮುಂದುವರಿಸುತ್ತೇವೆ, ಬೆಳೆಯುತ್ತಿರುವ ಆಕಾಂಕ್ಷೆ ಮತ್ತು ಉನ್ನತ ಮಟ್ಟದ ವಾಹನಗಳನ್ನು ಹೊಂದಲು ಗ್ರಾಹಕರ ಬಯಕೆ ಪೂರೈಸಲು ಉತ್ತೇಜಿತವಾಗಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ.