
ದೇಶದ ಯಾವುದೇ ಭಾಗದಲ್ಲಿ ಸುಲಭವಾಗಿ ಪಡಿತರ ಪಡೆದುಕೊಳ್ಳಲು ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ ಜಾರಿಗೆ ತರಲಾಗಿದೆ. ಇದಕ್ಕೆ ಪೂರಕವಾಗಿ ಮೇರಾ ರೇಷನ್ ಮೊಬೈಲ್ ಆಪ್ ಕೂಡ ಬಿಡುಗಡೆ ಮಾಡಲಾಗಿದೆ.
ಮೊದಲು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರವಿದ್ದ ಈ ಆಪ್ ನಲ್ಲಿ ಈಗ ಕನ್ನಡ ಭಾಷೆ ಅಳವಡಿಸಲಾಗಿದೆ. ಸಾಮಾನ್ಯ ಕನ್ನಡ ಓದಲು ಬರುವವರು ಕೂಡ ಪ್ರಯೋಜನ ಪಡೆಯಬಹುದು. ಕೃಷಿ ಕಾರ್ಮಿಕರು ಸೇರಿದಂತೆ ವಿವಿಧ ಕಾರಣಗಳಿಗೆ ದೇಶದ ಯಾವುದೇ ಕಡೆಗೆ ಹೋಗುವ ಕಾರ್ಮಿಕರು ಮೇರಾ ರೇಷನ್ ಆಪ್ ಮೂಲಕ ಪಡಿತರ ಪಡೆಯಬಹುದು.
ಆಧಾರ್ ನಂಬರ್ ಲಿಂಕ್ ಆದರೆ ಸಾಕು, ಮೇರಾ ರೇಷನ್ ಆಪ್ ನಲ್ಲಿ ಪಡಿತರ ಕಾರ್ಡ್ ನಂಬರ್, ವ್ಯವಹಾರದ ಮಾಹಿತಿ, ಪಡಿತರ ಅಂಗಡಿಗಳ ಮಾಹಿತಿ, ಪಡಿತರ ಲಭ್ಯತೆ ವಿವರ ಮೊದಲಾದವುಗಳನ್ನು ತಿಳಿಯಬಹುದು. ವಲಸಿಗರು ತಾವು ಇರುವ ಸ್ಥಳದಲ್ಲಿಯೇ ಪಡಿತರ ಪಡೆಯಬಹುದಾಗಿದೆ. ಕನ್ನಡ ಜೊತೆಗೆ, ತೆಲುಗು, ತಮಿಳು ಮೊದಲಾದ ಪ್ರಾದೇಶಿಕ ಭಾಷೆಗಳನ್ನು ಮೇರಾ ರೇಷನ್ ಆಪ್ ನಲ್ಲಿ ಸೇರಿಸಲಾಗಿದೆ.