ದೈಹಿಕ ದೌರ್ಬಲ್ಯಕ್ಕೆ ಮುಖ್ಯ ಕಾರಣ, ಆಹಾರ ಮತ್ತು ಕೆಟ್ಟ ಜೀವನಶೈಲಿ. ಇದ್ರಿಂದ ಕೇವಲ ದೈಹಿಕ ದೌರ್ಬಲ್ಯ ಮಾತ್ರವಲ್ಲ, ಲೈಂಗಿಕ ಸಮಸ್ಯೆ ಎದುರಾಗುತ್ತದೆ. ಜೀವನ ಶೈಲಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡಲ್ಲಿ ಈ ಎರಡರಲ್ಲೂ ಸುಧಾರಣೆ ಕಾಣಬಹುದು. ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲು ಕೆಲ ಮನೆ ಮದ್ದುಗಳನ್ನು ನೀವು ಬಳಸಬಹುದು.
ಲೈಂಗಿಕ ದೌರ್ಬಲ್ಯಕ್ಕೆ ಅನೇಕ ಕಾರಣಗಳಿವೆ. ನಿಯಮಿತವಾಗಿ ಫಾಸ್ಟ್ ಫುಡ್ ಆಹಾರ ಸೇವನೆ ಇದಕ್ಕೆ ಒಂದು ಕಾರಣ. ದೇಹದಲ್ಲಿ ಪ್ರೋಟೀನ್ ಕೊರತೆಯು ಲೈಂಗಿಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಒತ್ತಡ ಕೂಡ ಸೆಕ್ಸ್ ಡ್ರೈವ್ ಕಡಿಮೆ ಮಾಡುತ್ತದೆ. ಆಲ್ಕೊಹಾಲ್ ಅಥವಾ ಇತರ ಯಾವುದೇ ಮಾದಕ ವಸ್ತುಗಳ ಅತಿಯಾದ ಸೇವನೆಯು ಲೈಂಗಿಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಪ್ರಸಿದ್ಧ ಆಯುರ್ವೇದ ವೈದ್ಯರ ಪ್ರಕಾರ, ಖರ್ಜೂರ ಸೇವನೆಯು ಪುರುಷರಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಎರಡು ಮೂರು ಚೂರುಗಳನ್ನು ಹಾಲಿನಲ್ಲಿ ಕುದಿಸಿ, ರಾತ್ರಿ ಸೇವನೆ ಮಾಡುವುದ್ರಿಂದ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ.
ಪುರುಷರ ಆರೋಗ್ಯಕ್ಕೆ ಅಶ್ವಗಂಧ ಬಹಳ ಪ್ರಯೋಜನಕಾರಿ. ಅಶ್ವಗಂಧವು ಟೆಸ್ಟೋಸ್ಟೆರಾನ್ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ. ಇದರ ನಿಯಮಿತ ಸೇವನೆಯು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಶ್ವಗಂಧ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಬೆಳಿಗ್ಗೆ ಮತ್ತು ಸಂಜೆ ಸೇವಿಸುವುದ್ರಿಂದ ಸಾಕಷ್ಟು ಪ್ರಯೋಜನವಿದೆ.
ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿರುವ ಎಲ್ಲ ಪುರುಷರು ಬೆಳ್ಳುಳ್ಳಿ-ಈರುಳ್ಳಿಯನ್ನು ಹೆಚ್ಚಾಗಿ ಸೇವಿಸಬೇಕು. ಇದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಎರಡರಿಂದ ಮೂರು ಬೆಳ್ಳುಳ್ಳಿ ಸೇವನೆ ಮಾಡಬೇಕು. ಈರುಳ್ಳಿಯನ್ನು ಸಲಾಡ್ ರೀತಿಯಲ್ಲಿ ಸೇವನೆ ಮಾಡಬೇಕು.