ಇದು ಫ್ಯಾಷನ್ ಯುಗ. ಜನರು ದಿನಕ್ಕೊಂದು ಫ್ಯಾಷನ್ ಕೇಳ್ತಾರೆ. ಸದ್ಯ ಟೈಟ್ ಬಟ್ಟೆಯ ಫ್ಯಾಷನ್ ಇದೆ. ಜನರು ಬಿಗಿ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಆದ್ರೆ ಬಿಗಿ ಬಟ್ಟೆ ಪುರುಷರಿಗೆ ಒಳ್ಳೆಯದಲ್ಲ ಎಂಬುದು ಅಧ್ಯಯನದಿಂದ ಹೊರಬಿದ್ದಿದೆ.
ಪುರುಷ ಬಂಜೆತನಕ್ಕೆ ಬಿಗಿಯಾದ ಬಟ್ಟೆ ಕಾರಣವೆಂದು ಅಧ್ಯಯನ ಹೇಳಿದೆ. ಲೈಂಗಿಕ ಸಾಮರ್ಥ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆಯಂತೆ. ಲೈಂಗಿಕ ಸಮಸ್ಯೆಯಿಂದ ಬಳಲುತ್ತಿರುವ ಪುರುಷರ ಮೇಲೆ ಅಧ್ಯಯನ ನಡೆದಿತ್ತು. ಮಕ್ಕಳನ್ನು ಪಡೆಯುವ ಪ್ಲಾನ್ ನಲ್ಲಿರುವ ಪುರುಷರು ಸಡಿಲವಾದ ಬಟ್ಟೆಗಳನ್ನು ಧರಿಸಬೇಕೆಂದು ಅಧ್ಯಯನ ಹೇಳಿದೆ. ಸಡಿಲವಾದ ಬಟ್ಟೆಯಿಂದ ವೀರ್ಯದ ಸಂಖ್ಯೆ ಹಾಗೂ ಗುಣಮಟ್ಟ ಹೆಚ್ಚಾಗಲಿದೆ.
ಸಂಶೋಧನೆಯಲ್ಲಿ ಪುರುಷರ ಆಹಾರ ಪದ್ಧತಿ, ಜೀವನಶೈಲಿ, ನಿದ್ರೆಯ ಗುಣಮಟ್ಟ, ಸಿಗರೇಟ್- ಆಲ್ಕೊಹಾಲ್ ಸೇವನೆ ಮತ್ತು ಉಡುಗೆ ಬಗ್ಗೆಯೂ ಅಧ್ಯಯನ ಮಾಡಿದೆ. ಬಿಗಿಯಾದ ಬಟ್ಟೆ ಧರಿಸಿದ ಪುರುಷರಿಗಿಂತ ಸಡಿಲ ಬಟ್ಟೆ ಧರಿಸಿದ ಪುರುಷರ ವೀರ್ಯಾಣು ಸಂಖ್ಯೆ ಶೇಕಡಾ 17ರಷ್ಟು ಹೆಚ್ಚಿತ್ತು. ಹಾಗೆ ವೀರ್ಯದ ಸಾಮರ್ಥ್ಯ ಶೇಕಡಾ 33ರಷ್ಟು ಹೆಚ್ಚಿತ್ತು.